ಬಹುತೇಕರು ತಮ್ಮ ತಮ್ಮ ಮನೆಗಳಲ್ಲಿ ಶ್ವಾನವನ್ನು ಸಾಕುತ್ತಾರೆ. ಸಾಕಿದ ಶ್ವಾನವನ್ನು ಮಕ್ಕಳಂತೆ ಕಾಣುತ್ತಾರೆ. ಇನ್ನು ನಿಯತ್ತಿಗೆ ಹೆಸರಾದ ನಾಯಿ ಮಾಲೀಕರ ಮನೆಯಲ್ಲಿ ಒಬ್ಬರಾಗಿರುತ್ತದೆ.
ಇಲ್ಲೊಂದು ವೈರಲ್ ಆದ ವಿಡಿಯೋದಲ್ಲಿ ಮುದ್ದು ಬಾಲಕಿ ತನ್ನ ಪ್ರೀತಿಯ ಶ್ವಾನದೊಂದಿಗೆ ಆಟ ಆಡುತ್ತಾ ಖುಷಿಯಿಂದ ಕಳೆಯುವ ಆನಂದದಾಯಕ ದೃಶ್ಯ ಕಾರಣಬಹುದು.
@buitengebieden_ ಎಂಬ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಆಗಿರುವ ವಿಡಿಯೋದಲ್ಲಿ ಮುದ್ದು ಬಾಲಕಿ ತನ್ನ ಪ್ರೀತಿಯ ಶ್ವಾನದೊಂದಿಗೆ ಕಳೆದ ಅತೀ ಸುಂದರ ಕ್ಷಣಗಳನ್ನು ಕಾಣಬಹುದು.
ಇನ್ನು ಬಾಲಕಿ ಏನೆಲ್ಲಾ ಮಾಡಿ ತೋರಿಸುತ್ತಾಳೋ ಅದನ್ನೆಲ್ಲಾ ಈ ಶ್ವಾನ ಅನುಕರಣೆ ಮಾಡುತ್ತದೆ. ಪುಟಾಣಿಯ ಅಣತಿಯನ್ನು ಚಾಚೂ ತಪ್ಪದೆ ಪಾಲಿಸುವ ಈ ಮುಗ್ಧ ಶ್ವಾನ ನೆಟ್ಟಿಗರ ಮನ ಗೆದ್ದಿದೆ.
PublicNext
22/12/2021 06:09 pm