ಮೊದಲ ಪ್ರೀತಿ-ಮೊದಲ ಸ್ನೇಹ-ಮೊದಲ ನೋಟ. ಎಲ್ಲ ಕಾಲಕ್ಕೂ ಇವು ವಿಶೇಷವೇ ಆಗಿರುತ್ತವೆ.14 ತಿಂಗಳ ಮಗುವೊಂದು ಫಸ್ಟ್ ಟೈಮ್ ನಾಯಿಯನ್ನ ನೋಡಿದೆ. ಆಗ ಈ ಪುಟ್ಟ ಮಗುವಿಗೆ ಆದ ಖುಷಿನೇ ವಿಭಿನ್ನವಾಗಿಯೇ ಇದೆ. ಅದನ್ನ ವ್ಯಕ್ತಪಡಿಸಿದ ರೀತಿನೂ ವಿಶೇಷ-ವಿಭಿನ್ನ ಮತ್ತು ವಿಶಿಷ್ಠ.
ನೀವು ಈಗ ನೋಡ್ತಿರೋ ವೀಡಿಯೋ ಅದೇನೇ.ಪುಟ್ಟ ಮಗು ಫಸ್ಟ್ ಟೈಮ್ ಶ್ವಾನವನ್ನ ನೋಡಿದೆ. ಆಗ ಈ ಮಗುವಿಗೆ ಇನ್ನಿಲ್ಲದಂತೆ ಖುಷಿ. ಇದನ್ನ ಕಂಡ ಅಮ್ಮ ಮಗುವಿನ ವೀಡಿಯೋ ಕೂಡ ಮಾಡಿದ್ದಾರೆ.
ಇದೇ ವೀಡಿಯೋನೇ ಸಾಮಾಜಿತ ತಾಣದಲ್ಲಿ ವೈರಲ್ ಆಗುತ್ತಿದೆ. ಡಿಸೆಂಬರ್-09 ರಂದು ಈ ವೀಡಿಯೋ ಅಪ್‌ಲೋಡ್ ಆಗಿದೆ. ಇಲ್ಲಿವರೆಗೂ 70 ಸಾವಿರಕ್ಕೂ ಹೆಚ್ಚು ಜನ ಈ ವೀಡಿಯೋ ವೀಕ್ಷಿಸಿ ಖುಷಿಪಟ್ಟಿದ್ದಾರೆ.
PublicNext
13/12/2021 04:14 pm