ಮದುಮಗ ಕುದುರೇ ಏರಿದ ಖುಷಿಯಲ್ಲಿದ್ದ.ಇನ್ನೇನು ಅತ್ತೆ-ಮಾವ ವೆಲ್ ಕಮ್ ಮಾಡ್ತಾರೆ ಅಂತ ಹೆಮ್ಮೆ ಪಡ್ತಿದ್ದ.ಆದರೆ ಅದ್ಯಾವ್ನೋ ಕುದುರೆ ಮುಂದೆ ಪಟಾಕಿ ಹೊಡೆದು ಬಿಟ್ಟಾ ನೋಡಿ. ಅಲ್ಲಿಗೆ ಇಲ್ಲಿ ಎಲ್ಲವೂ ಅಯೋಮಯ.
ಕುದುರೆ ಓಟ,ಅದರ ನೋಟ, ಮತ್ತು ಅದರ ಮೂಡ್. ನಿಜಕ್ಕೂ ಯಾರಿಗೂ ತಿಳಿಯೋದೇ ಇಲ್ಲ. ಅದಕ್ಕೇನೆ ಪಟಾಕಿ ಸಿಡಿದ ಕೂಡಲೇ ಕುದುರೆ ಎದ್ನೋ ಬಿಡ್ನೋ ಅಂತ ಓಡಿ ಬಿಟ್ಟಿದೆ.
ಇದನ್ನ ಕಂಡ ಕುದುರೆ ಓನರ್ ಗಾಬರಿ ಆಗಿದ್ದಾನೆ. ಕುದುರೆ ಹಿಡಿದುಕೊಂಡು ಬಂದ್ರಾಯಿತು ಅಂತಲೂ ಹಿಂದೆ ಹಿಂದೇನೆ ಓಡಿದ್ದಾನೆ. ಆದರೆ ಕುದುರೆ ಸಿಗಬೇಕಲ್ಲ ಮಾರಾಯ್ರೆ. ನೋ ವೇ ಚಾನ್ಸೇ ಇಲ್ಲ ಬಿಡಿ. ಅದೇ ಈ ಕುದುರೆ ವೀಡಿಯೋನೆ ಈಗ ಬೇಜಾನ್ ವೈರಲ್ ಆಗುತ್ತಿದೆ.
PublicNext
12/12/2021 05:15 pm