ಮೂಕ ಪ್ರಾಣಿಗಳಿಗಿರೋ ಒಳ್ಳೆ ಬುದ್ಧಿ ಮನುಷ್ಯರಿಗೆ ಇರೋದಿಲ್ಲ ಅನ್ನೋದಕ್ಕೆ ಅದೆಷ್ಟೋ ಉದಾಹರಣೆಗಳಿವೆ. ಅದೇ ರೀತಿ ಇಲ್ಲೊಂದು ನಾಯಿ ಮನುಷ್ಯರಿಗಿಲ್ಲದ ಕಾಮನ್ ಸೆನ್ಸ್ ತನಗಿದೆ ಅನ್ನೋದನ್ನ ಪ್ರೂವ್ ಮಾಡಿದಂತಿದೆ.
ಹೌದು ರಸ್ತೆ ದಾಟಬೇಕಾಗಿದ್ದ ನಾಯಿ ರೆಡ್ ಸಿಗ್ನಲ್ ನೋಡಿ ರಸ್ತೆ ಬದಿಯಲ್ಲೇ ನಿಂತಿತ್ತು. ಆದ್ರೆ ಮನುಷ್ಯರು ಮಾತ್ರ ರೆಡ್ ಸಿಗ್ನಲ್ ನಡುವೆಯೂ ರಸ್ತೆ ದಾಟುತ್ತಿದ್ರು. ಅವರನ್ನೆಲ್ಲಾ ಸುಮ್ಮನೆ ನೋಡುತ್ತಾ ನಿಂತಿದ್ದ ನಾಯಿ ಗ್ರೀನ್ ಸಿಗ್ನಲ್ ಬೀಳುತ್ತಿದ್ದಂತೆ ರಸ್ತೆ ದಾಟಲು ಮುಂದಾಯ್ತು. ತನಗೆ ಮಾನವರಿಗಿಂತ ಹೆಚ್ಚು ಬುದ್ಧಿ ಇದೆ ಅನ್ನೋದನ್ನ ಸಾಬೀತು ಪಡಿಸಿದ ಈ ನಾಯಿಯ ವೀಡಿಯೋ ಇದೀಗ ಸಾಕಷ್ಟು ವೈರಲ್ ಆಗಿದೆ
PublicNext
11/12/2021 04:14 pm