ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಸ್ಸಿಂಗ್‌ ಹಾವು: ಮಿಸ್‌ ಮಾಡದೆ ನೋಡಿ ಉರಗ ʼಉರುಳಾಟʼ

ಈ ವೀಡಿಯೊದಲ್ಲಿ ಸೆರೆಯಾಗಿರುವ ಹಾವು, ನಾವು-ನೀವು ಕಂಡಿರುವ ಸಾಮಾನ್ಯ ಹಾವಲ್ಲ, ಬದಲಾಗಿ ಅಸಾಮಾನ್ಯ ವೈವಿಧ್ಯಗಳಿರುವ ಉರಗವಿದು. ಈ ಬಗ್ಗೆ ಸಂಕ್ಷಿಪ್ತವಾಗಿ ಅರಿಯೋಣ ಬನ್ನಿ... ಪರಿಸರ ಪ್ರೇಮಿಯೊಬ್ಬರು ಈ ಅತ್ಯಪರೂಪದ ಕಪ್ಪು ಹಾವಿನ ಚಲನ ವಲನ, ಜೀವನ ಕ್ರಮವನ್ನು ಅಭ್ಯಸಿಸಿ, ಅಷ್ಟಿಷ್ಟು ಮಾಹಿತಿ ಕಲೆ ಹಾಕಿದ್ದಾರೆ.

ಈ ವಿಚಿತ್ರ ಹಾವನ್ನು "ಹಿಸ್ಸಿಂಗ್" ನಾಗರಹಾವೆಂದು ಹೊರ ಜಗತ್ತಿಗೆ ಪರಿಚಯಿಸಲಾಗಿದೆ. ಆದರೆ, ವಾಸ್ತವವಾಗಿ ಇದು ನಾಗರವಲ್ಲ, ವಿಷಕಾರಿಯೂ ಅಲ್ಲ! ದಾರಿಯಲ್ಲಿ ಈ ಹಾವು, ಶತ್ರುವಿನಿಂದ ತನ್ನ ಜೀವಕ್ಕೇನಾದರೂ ಅಪಾಯದ ಮುನ್ಸೂಚನೆ ಅರಿತ ತಕ್ಷಣವೇ ದೀರ್ಘವಾಗಿ ಉಸಿರಾಡುವ ಮೂಲಕ ತನ್ನ ಕುತ್ತಿಗೆ ಮತ್ತು ದೇಹವನ್ನು ಉಬ್ಬಿಸುತ್ತದೆ ಮತ್ತು ಅಷ್ಟೇ ವೇಗವಾಗಿ ತನ್ನೊಳಗೆ ಎಳೆದುಕೊಂಡಿರುವ ಗಾಳಿಯನ್ನು ಹೊರ ಹಾಕುತ್ತದೆ.

ಈ ಕ್ರಿಯೆ ಫಲ ನೀಡದಿದ್ದರೆ, ಬೆನ್ನಿನ ಆಧಾರದಲ್ಲಿ ನೆಲಕ್ಕುರುಳಿ ಭಯಾನಕ ನೋವಿನಿಂದ ನರಳಾಡುವಂತೆ ವೃತ್ತಾಕಾರದಲ್ಲಿ ತಿರುಗುತ್ತದೆ!

ಈ "ಸಾವಿನ ಪ್ರದರ್ಶನ"ದ ಸಂದರ್ಭ ತನ್ನ ಹೊಟ್ಟೆ ಸಂಬಂಧಿತ ವಿಚಾರಗಳನ್ನೂ ಪುನಚ್ಚೇತನಗೊಳಿಸುತ್ತವೆ! ಹೇಗೆಂದರೆ ಮಲ ವಿಸರ್ಜನೆ ಮಾಡುತ್ತವೆ, ಪರಿಮಳ ಬಿಡುಗಡೆಯಾಗಿಸುತ್ತದೆ, ಅಷ್ಟೇ ಏಕೆ ಬಾಯಿಯಿಂದ ರಕ್ತವನ್ನೂ ಕಾರಬಹುದು.

ಈ ಎಲ್ಲ "ನಟನೆ" ಬಳಿಕ ಹಾವು ನಿರಾಳವಾಗುತ್ತದೆ. ಈ ವೇಳೆ ಹಾವು ಸತ್ತಂತೆ ನಮಗೆ ಗೋಚರಿಸುತ್ತದೆ!

Edited By : Shivu K
PublicNext

PublicNext

28/10/2021 01:41 pm

Cinque Terre

39.49 K

Cinque Terre

0

ಸಂಬಂಧಿತ ಸುದ್ದಿ