ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೆವ್ವದ ಅಟ್ಟಹಾಸ ಭೂತ ಬಿಡಿಸಲು ಬಂದವ ಕಕ್ಕಾಬಿಕ್ಕಿ

ಭೂತ-ಪ್ರೇತಗಳು ಇವೆಯೋ ಇಲ್ಲವೋ ಗೊತ್ತಿಲ್ಲ. ಅನುಭವಕ್ಕೆ ಬಂದೋರು ತಮ್ಮದೇ ರೀತಿ ವರ್ಣಿಸುತ್ತಾರೆ. ಸೈಕಾಲಜಿಕಲ್ ಎಫೆಕ್ಟ್ ನಿಂದಲೂ ಭೂತ-ಪ್ರೇತಗಳು ಇವೆ ಅನ್ನೋರು ಇದ್ದಾರೆ.ಆದರೆ ಇಲ್ಲೊಬ್ಬ ಭೂಪ ಭೂತವನ್ನ ಬಿಡಿಸಲು ಹೋಗಿ ಭೂತದಿಂದಲೇ ಏಟು ತಿಂದು ಕಕ್ಕಾಬಿಕ್ಕಿಯಾಗಿದ್ದಾನೆ. ಬನ್ನಿ, ಹೇಳ್ತೀವಿ..

ಸಾಮಾನ್ಯವಾಗಿ ಭೂತ-ಪ್ರೇತಗಳು ದೇವಸ್ಥಾನ-ದರ್ಗಾದ ಒಳಗೆ ಬರೋದಿಲ್ಲ ಅನ್ನೋ ನಂಬಿಕೆ ಚಾಲ್ತಿಯಲ್ಲಿದೆ.ಅಲ್ಲಿ ಬಂದ್ರೆ ಭೂತಕ್ಕೆ ಛಡಿ ಏಟು ಬೀಳುತ್ತವೆ ಎಂಬ ಭಯನೂ ಇರಬಹುದು. ಇರಲಿ, ಆದರೆ ಭೂತ ಬಿಡಿಸೋದನ್ನೇ ಬಿಜಿನೆಸ್ ಮಾಡಿಕೊಂಡವ್ರು ಭೂತವನ್ನ ಹೊಡೆದೋಡಿಸಲು ಏನೇನೋ ಕರಾಮತ್ ಮಾಡುತ್ತಾರೆ. ಅದೇ ಥರಹವೇ ಇಲ್ಲೊಬ್ಬ ಆಸಾಮಿ ಭೂತವನ್ನ ಹೊಡೆಯಲು ಹೋಗಿ ಭೂತದ ಕಡೆಯಿಂದಲೇ ಹೊಡೆತ ತಿಂದು ಹಣ್ಣುಗಾಯಿ ನೀರುಗಾಯಿ ಆಗಿದ್ದಾನೆ.

ಈ ವೀಡಿಯೋವನ್ನ ಯಾರು ಚಿತ್ರೀಕರಿಸಿದರು ? ಎಲ್ಲಿ ನಡೆದದ್ದು ಈ ಭೂತದ ಅಟ್ಟಹಾಸ ? ಈ ಮಾಹಿತಿ ನಿಮ್ಗೆ ಸಿಗೋದಿಲ್ಲ.ಆದರೆ ದೆವ್ವದ ಈ ವೀಡಿಯೋ ಎಲ್ಲೆಡೆ ವೈರಲ್ ಆಗಿ, ಮಜಾಕೊಡುತ್ತಿರೋದಂತೂ ಅಷ್ಟೇ ಸತ್ಯ.

Edited By :
PublicNext

PublicNext

17/10/2021 04:37 pm

Cinque Terre

73.15 K

Cinque Terre

9

ಸಂಬಂಧಿತ ಸುದ್ದಿ