ಮದುವೆಯಾಗುತ್ತಿರುವ ಹುಮ್ಮಸ್ಸಿನಲ್ಲಿರುವ ವಧು ವರರು ಕುಣಿದು ಕುಪ್ಪಳಿಸಿದ ಕ್ಷಣವನ್ನು ನೀವು ನೋಡಿದ್ರೆ ನಿಜಕ್ಕೂ ನಕ್ಕು ನಕ್ಕು ಸುಸ್ತಾಗುವುದು ಗ್ಯಾರಂಟಿ.
ಮದುವೆಯಲ್ಲಿ ಮದು ಮಕ್ಕಳು ಚಂದವಾಗಿ ಸಿಂಗರಿಸಿಕೊಂಡು ನೆರೆದಿದ್ದ ಜನರ ಮುಂದೆ ಗ್ರ್ಯಾಂಡ್ ಎಂಟ್ರಿ ಕೊಡೋದು ಸಹಜ. ಆದ್ರೆ ಕೆಲವುಬಾರಿ ಅದು ಉಲ್ಟಾ ಆಗಿಬಿಟ್ಟಿರುತ್ತದೆ. ಅದು ನೋಡುಗರಿಗೆ ಹಾಸ್ಯಮಯವಾಗಿ ಕಾಣಿಸುತ್ತದೆ. ಇದಕ್ಕೆ ವೈರಲ್ ಆದ ಈ ವಿಡಿಯೋನೆ ಸಾಕ್ಷಿ.
ವೇದಿಕೆಗೆ ಬರುವಾಗ ಕೈ ಹಿಡಿದು ಕುಣಿದಾಡುತ್ತಾ ಬರುತ್ತಾರೆ. ವೇದಿಕೆಗೆ ಬಂದೊಡನೆ ವರ, ವಧುವನ್ನು ಬೆನ್ನ ಮೇಲೆ ಹೊತ್ತು ಕುಣಿದಾಡಲು ಮುಂದಾಗುತ್ತಾನೆ. ಅಷ್ಟರಲ್ಲಿ ಕಾಲು ಜಾರಿ ವೇದಿಕೆಯಿಂದ ಕೆಳಗೆ ಬೀಳುತ್ತಾನೆ. ಬಿದ್ದರೂ ಮತ್ತೆ ಮೇಲೇಳುವ ಜೋಡಿ ಅದೇ ಖುಷಿಯಲ್ಲಿ ನೃತ್ಯ ಮುಂದುವರೆಸಿದ್ದನ್ನು ಕಾಣಬಹುದು.
PublicNext
28/09/2021 01:25 pm