ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುವ ಕೆಲವೊಂದು ದೃಶ್ಯಗಳು ಬಹುಬೇಗ ನಮ್ಮ ಹೃದಯ ಗೆಲ್ಲುತ್ತವೆ. ಸದ್ಯ ಅಂತಹದ್ದೇ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ.
ಈಸ್ಟ್ ಕೌಂಟಿ ಸ್ಯಾನ್ ಡಿಯಾಗೋದಲ್ಲಿ ಸೆರೆಯಾದ ದೃಶ್ಯದಲ್ಲಿ ಧಗಧಗಿಸುವ ಕಾರಿನಿಂದ 90ರ ಹರೆಯದ ಇಬ್ಬರು ವೃದ್ಧರನ್ನು ರಕ್ಷಿಸಿದವರ ಕಾರ್ಯ ನಿಜಕ್ಕೂ ಶ್ಲಾಘನೀಯ.
ಉರಿಯುವ ಬೆಂಕಿಯ ಮಧ್ಯೆದಲ್ಲಿ ಜೀವದ ಹಂಗು ತೊರೆದು ಅಪಾಯದಲ್ಲಿರುವವರ ರಕ್ಷಣೆಗೆ ಮುಂದಾದ ಐವರನ್ನು ಈಗಾ `ರಿಯಲ್ ಹೀರೋ'ಗಳು ಎಂದು ನೆಟ್ಟಿಗರು ಬಣ್ಣಿಸುತ್ತಿದ್ದಾರೆ.
ಸ್ಯಾನ್ ಡಿಯಾಗೋ ಕೌಂಟಿಯ ಅಗ್ನಿಶಾಮಕ ಇಲಾಖೆ ಈ ವಿಡಿಯೋವನ್ನು ಹಂಚಿಕೊಂಡ ಬಳಿಕ ಈ ವಿಡಿಯೋ ಇನ್ನಷ್ಟು ವೈರಲ್ ಆಗುತ್ತಿದೆ.
ಗಾಯಗೊಂಡಿದ್ದ ಒಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಾರವೇ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ.
PublicNext
10/09/2021 04:01 pm