ಪ್ರಕೃತಿಯೇ ವಿಸ್ಮಯ ಇಲ್ಲಿನ ಕೆಲವೊಂದು ಸೃಷ್ಟಿಗಳಂತೂ ನಮ್ಮ ಕಣ್ಣನ್ನೇ ನಾವು ನಂಬಲಾರದ ಮಟ್ಟಿಗೆ ಆಶ್ಚರ್ಯವನ್ನುಂಟು ಮಾಡುತ್ತವೆ. ಸಾಕಷ್ಟು ರಹಸ್ಯಗಳನ್ನ ತನ್ನ ಒಡಲಲ್ಲಿ ಇಟ್ಟುಕೊಂಡಿರೋ ಪ್ರಕೃತಿ ಸದಾ ನಮ್ಮನ್ನು ಅಚ್ಚರಿಗೆ ಒಳಪಡಿಸುತ್ತದೆ.
ಸದ್ಯ ವೈರಲ್ ಆಗಿರುವ ವಿಡಿಯೋ ಅಚ್ಚರಿ ಮೂಡಿಸಿದೆ. ತಕ್ಷಣಕ್ಕೆ ನೋಡಿದಾಗ ಇದು ಥೇಟ್ ಎಲೆಯ ರೀತಿಯೇ ಕಾಣಿಸುತ್ತದೆ. ಆದರೆ, ಇದು ಎಲೆಯಲ್ಲ ಇದಕ್ಕೆ ಜೀವ ಇದೆ...! ಅಚ್ಚರಿಯಾದರೂ ಇದು ಸತ್ಯ.
ಇದು ಎಲೆಯ ರೀತಿಯೇ ಕಾಣುವ ಕೀಟವೊಂದರ ದೃಶ್ಯ. ಇಂಗ್ಲೀಷ್ ನಲ್ಲಿ ಈ ಕೀಟವನ್ನು ಲೀಫ್ ಇನ್ ಸೆಕ್ಟ್ ಎಂದು ಕರೆಯುತ್ತಾರೆ. ವೈಜ್ಞಾನಿಕವಾಗಿ ಇದನ್ನು ಫಿಲಿಯಂ ಗಿಗಾಂಟಿಯಂ [Phyllium Giganteum] ಎಂದೂ ಕರೆಯಲಾಗುತ್ತದೆ. ಸದ್ಯ ಈ ಎಲೆಯ ರೀತಿ ಕಾಣುವ ಕೀಟದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
science ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
PublicNext
29/08/2021 04:05 pm