ನಮ್ಮ ಪ್ರಕೃತಿಯ ಬಗ್ಗೆ ತಿಳಿದಷ್ಟು ಅದು ಇನ್ನೂ ನಿಗೂಢ. ವೈರಲ್ ಆಗುತ್ತಿರುವ ಈ ಪಿಂಕ್ ಡಾಲ್ಫಿನ್ ವಿಡಿಯೋ ಪ್ರಾಣಿಪ್ರಿಯರ ಹೃದಯಗೆದ್ದಿದೆ. ಪ್ರಪಂಚದ ಅತಿ ದೊಡ್ಡ ನದಿ ಅಮೆಜಾನ್ ನಲ್ಲಿ ಈ ಪಿಂಕ್ ಡಾಲ್ಫಿನ್ ಗಳು ಕಂಡು ಬರುತ್ತವೆ. ಅತ್ಯಂತ ಶುದ್ಧ ನೀರಿನಲ್ಲಷ್ಟೇ ಇರಲು ಇಚ್ಛಿಸುವ ಇವು, ಮನುಷ್ಯರ ಕಣ್ಣಿಗೆ ಕಾಣುವುದು ಅಪರೂಪ. ಆಶ್ಚರ್ಯ ಅಂದ್ರೆ ಇವುಗಳಲ್ಲಿ ಹೆಣ್ಣು ಡಾಲ್ಫಿನ್ ಗಿಂತ ಗಂಡು ಡಾಲ್ಫಿನ್ ಗಳು ಹೆಚ್ಚು ಪಿಂಕ್ ಬಣ್ಣ ಹೊಂದಿವೆ. ಜನ್ಮತಃ ಬೂದು ಬಣ್ಣದಿಂದಲೇ ಜನಿಸುವ ಇವು ಪ್ರೌಢಾವಸ್ತೆಗೆ ಬಂದಂತೆಲ್ಲ ನೈಸರ್ಗಿಕವಾಗಿ ಪಿಂಕ್ ಬಣ್ಣಕ್ಕೆ ತಿರುಗುತ್ತವೆ. ಪ್ರಾಣಿ ಪ್ರಪಂಚ ತಿಳಿದಷ್ಟು ವಿಸ್ಮಯ..ಅಲ್ವಾ?
PublicNext
22/08/2021 09:54 am