ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಂದಿ ಆಯುವ ಮಹಿಳೆಯ ಇಂಗ್ಲೀಷ್ ಭಾಷೆಗೆ ನೆಟ್ಟಿಗರು ಫಿದಾ : ವಿಡಿಯೋ ವೈರಲ್

ಬೆಂಗಳೂರು: ಅವಳನ್ನು ನೋಡಿದ್ರೆ ಇಷ್ಟು ಚನ್ನಾಗಿ ಇಂಗ್ಲೀಷ್ ಮಾತನಾಡುತ್ತಾಳೆ ಎಂದು ಊಹಿಸಲು ಸಾಧ್ಯವಿಲ್ಲ. ನಿತ್ಯ ಚಿಂದಿ ಆಯ್ದು ಬದುಕು ನಡೆಸುತ್ತಿರುವ ಈ ಮಹಿಳೆ ಬಾಯಿಯಲ್ಲಿ ಇಂಗ್ಲೀಷ್ ಕೇಳಿದ ಮಂದಿ ನಿಬ್ಬೆರಗಾಗಿದ್ದಾರೆ.

ಮಹಿಳೆಯ ಇಂಗ್ಲೀಷ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಈಕೆಯ ಇಂಗ್ಲೀಷ್ ಕೇಳಿದ ನೆಟ್ಟಿಗರೆಲ್ಲಾ ಫಿದಾ ಆಗಿದ್ದಾರೆ.

ವಿಡಿಯೋ ಮಾಡುತ್ತಿರುವ ಯುವತಿಯ ಜತೆ ಚಿಂದಿ ಆಯುವ ಮಹಿಳೆ ಸರಾಗವಾಗಿ ಇಂಗ್ಲೀಷ್ ನಲ್ಲಿ ಮಾತನಾಡುತ್ತಿದ್ದಾಳೆ. ಕೇಳಿದ ಪ್ರಶ್ನೆಗಳಿಗೆಲ್ಲಾ ಇಂಗ್ಲೀಷ್ ಭಾಷೆಯಲ್ಲಿಯೇ ಉತ್ತರ ನೀಡುತ್ತಿದ್ದಾಳೆ.

ಇವಳ ಹೆಸರು ಸಿಸಿಲಿಯಾ ಮಾರ್ಗರೇಟ್ ಲಾವರೆನ್ಸ್ ಎಂದು ಹೇಳಿಕೊಂಡಿದ್ದಾಳೆ. ವಿಡಿಯೋ ಮಾಡಿದ ಶಚಿನಾ ಹೆಗ್ಗಾರ್ ಕೇಳಿದ ಪ್ರಶ್ನೆಗೆ ಸಿಸಿಲಿಯಾ ಇಂಗ್ಲೀಷ್ ನಲ್ಲಿಯೇ ಉತ್ತರಿಸಿದ್ದಾರೆ.

ಸದ್ಯ ಇನ್ ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು ವಿಡಿಯೋದಲ್ಲಿ ಸಿಸಿಲಿಯಾ ಜಪಾನ್ ನಲ್ಲಿ ವಾಸಿಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.

Edited By : Shivu K
PublicNext

PublicNext

17/08/2021 03:37 pm

Cinque Terre

53.85 K

Cinque Terre

4

ಸಂಬಂಧಿತ ಸುದ್ದಿ