ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಟಿಎಂ ದರೋಡೆಗೆ ಹೋಗಿ ಮಷಿನ್-ಗೋಡೆ ಮಧ್ಯೆ ಸಿಕ್ಕಿಬಿದ್ದ ಕಳ್ಳ.!

ಚೆನ್ನೈ: ಮದ್ಯದ ಮತ್ತಿನಲ್ಲಿ ದರೋಡೆಗೆಂದು ಎಟಿಎಂ ಕೇಂದ್ರಕ್ಕೆ ನುಗ್ಗಿದ್ದ ಕಳ್ಳನೊಬ್ಬ ಎಟಿಎಂ ಮಷಿನ್ ಹಾಗೂ ಗೋಡೆ ಮಧ್ಯೆ ಸಿಕ್ಕಾಕಿಕೊಂಡ ಘಟನೆ ಚೆನ್ನೈನಲ್ಲಿ ನಡೆದಿದೆ. ಕಳ್ಳ ಎಟಿಎಂ ಮಷಿನ್ ಹಾಗೂ ಗೋಡೆ ನಡುವೆ ಸಿಕ್ಕು ಒದ್ದಾಡಿರುವ ವಿಡಿಯೋ ಸೆರೆಯಾಗಿದ್ದು, ಫುಲ್​ ವೈರಲ್​ ಆಗಿದೆ.

ಬಿಹಾರ ಮೂಲದ ಉಪೇಂದ್ರ ರಾಯ್ (28) ಎಟಿಎಂ ದರೋಡೆ ಮಾಡಲು ಬಂದು ಸಿಕ್ಕಿಹಾಕಿಕೊಂಡ ಕಳ್ಳ. ಕಂಠಪೂರ್ತಿ ಕುಡಿದಿದ್ದ ಉಪೇಂದ್ರ ರಾಯ್​ ಎಟಿಎಂ ಒಡೆದು ದರೋಡೆ ಮಾಡಲು ಹೋಗಿದ್ದ. ಆದರೆ ಅಲ್ಲಿ ತಾನೇನು ಮಾಡುತ್ತಿದ್ದೇನೆ ಎಂದು ಗೊತ್ತಾಗದಷ್ಟು ಅಮಲಿನಲ್ಲಿದ್ದ. ಎಟಿಎಂ ಮಷಿನ್ ಹಿಂದೆ ಹೋಗಿ ನಿಂತ ಕಳ್ಳ ಗೋಡೆಯ ಬಳಿ ಸಿಕ್ಕಿಹಾಕಿಕೊಂಡಿದ್ದಾನೆ. ಅಲ್ಲಿಂದ ಹೊರಗೆ ಬರಲು ಸಾಧ್ಯವಾಗಿಲ್ಲ. ಅಲ್ಲಿಂದಲೇ ಎಟಿಎಂ ಒಡೆದು ಆತ ಹಣ ದೋಚಲು ಮುಂದಾಗಿದ್ದ. ಈ ಶಬ್ದ ಕೇಳಿದ ಪಕ್ಕದ ಮನೆಯವರು ಪೊಲೀಸರಿಗೆ ತಕ್ಷಣ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಎಟಿಎಂ ಸೆಂಟರ್​ನಲ್ಲಿ ಸಿಕ್ಕಿಬಿದ್ದಿದ್ದ ಕಳ್ಳನನ್ನು ಅಲ್ಲಿಂದ ಬಿಡಿಸಿ ವಶಕ್ಕೆ ಪಡೆದಿದ್ದಾರೆ. ಆತನನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

Edited By : Shivu K
PublicNext

PublicNext

13/08/2021 12:07 pm

Cinque Terre

75.69 K

Cinque Terre

5

ಸಂಬಂಧಿತ ಸುದ್ದಿ