ಹಾವು ಎಂದರೆ ಯಾರಿಗೆ ಭಯ ಇರಲ್ಲ ಹೇಳಿ?. ಅದರಲ್ಲೂ ಒಂದೇ ಕಡೆ ರಾಶಿ ರಾಶಿ ಹಾವುಗಳು ಒಂದೇ ಕಡೆ ಕಂಡರೆ ಹೇಗಿರಬೇಡ? ಕಲ್ಪನೆ ಮಾಡಿಕೊಳ್ಳುವುದೂ ಕಷ್ಟ ಅಲ್ಲವೆ? ಹೋಗಲಿ ನಿಮ್ಮ ಹಾಸಿಗೆಯೊಳಕ್ಕೆ ಹಾವುಗಳ ಕಂಡರೆ....! ನೆನೆಸಿಕೊಂಡರೆ ಮೈಯೆಲ್ಲಾ ನಡುಗಲು ಶುರುವಾಗುತ್ತದೆಯಲ್ಲವೆ? ವೈರಲ್ ಆಗಿರುವ ಒಂದು ವಿಡಿಯೋ ಇಲ್ಲಿದೆ ನೋಡಿ...
ಎಲ್ಲರೂ ಹಾಸಿಗೆ ಮೇಲೆ ಸಂಸಾರ ಮಾಡಿದರೆ ಈ ಹಾವುಗಳು ಹಾಸಿಗೆ ಒಳಗೆ ಅಡಗಿ ಸಂಸಾರ ಮಾಡಿವೆ. ಈ ದೃಶ್ಯವನ್ನ ನೋಡಿ. ಹಾಳಾಗಿರುವ ಹಾಸಿಗೆಯೊಂದನ್ನು ಮನೆಯ ಹೊರಗಡೆ ವರ್ಷಾನುಗಟ್ಟಲೆ ಇಡಲಾಗಿತ್ತು. ಅದರಲ್ಲಿ ಹಾವುಗಳು ಈ ಮಟ್ಟಿಗೆ ಸಂಸಾರ ಮಾಡಿಕೊಂಡಿದೆ. ಹಾಸಿಗೆ ಹರಿದು ನೋಡಿದಾಗ ಈ ಭಯಾನಕ ದೃಶ್ಯ ಕಂಡುಬಂದಿದೆ. ಅನುಮಾನ ಬಂದು ಹಾಸಿಗೆ ಹರಿದು ನೋಡಿದವರು ಬೆಚ್ಚಿ ಬಿದ್ದಿದ್ದಾರೆ. ಒಳಗೆ ಹಾವುಗಳು ತಮ್ಮ ಇಡೀ ವಂಶವನ್ನೇ ಬೆಳೆಸಿಕೊಂಡಿವೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
PublicNext
23/02/2021 07:17 pm