ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಜ್ಜಿ ನೀಡಿದ 5 ಸಲಹೆ : ವಿಡಿಯೋ ವೈರಲ್

ನಿತ್ಯ ಸೋಷಿಯಲ್ ಮೀಡಿಯಾದಲ್ಲಿ ಹತ್ತಾರು ವಿಡಿಯೋಗಳು ವೈರಲ್ ಆಗುತ್ತವೆ ಅದರಲ್ಲಿ ಕೆಲ ವಿಡಿಯೋಗಳು ನಮಗೆ ಸಿಕ್ಕಾಪಟ್ಟೆ ಮನರಂಜನೆ ನೀಡಿದರೆ, ಇನ್ನೂ ಕೆಲವು ಜೀವನಪಾಠ ಹೇಳಿಕೊಡುತ್ತವೆ. ಅಂತಹದ್ದೇ ಮತ್ತೊಂದು ವಿಡಿಯೋ ಇದೀಗ ಭಾರಿ ಸದ್ದ್ ಮಾಡುತ್ತಿದೆ.

ವಯಸ್ಸಿನಲ್ಲಿ ಸೆಂಚುರಿ ಬಾರಿಸಿದರೂ ಕೂಡ ಇನ್ನೂ ಗಟ್ಟಿಮುಟ್ಟಾಗಿರುವ ಈ ಅಜ್ಜಿ ವಿಡಿಯೋದಲ್ಲಿ ನೀಡಿರುವ ಜೀವನಪಾಠಗಳು ಪ್ರತಿಯೊಬ್ಬರಿಗೂ ಅಗತ್ಯವಾಗಿವೆ.

100 ವರ್ಷ ತುಂಬಿರುವ ಲಿಯೊನೊರಾ ರೇಮಂಡ್ ಎಂಬ ಅಜ್ಜಿ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಪಾಲಿಸಬೇಕಾದ 5 ಉಪಯುಕ್ತ ಸಲಹೆಗಳು ನೀಡಿ ಲಕ್ಷಾಂತರ ಜನರ ಹೃದಯ ಗೆದ್ದಿದ್ದಾರೆ.

'ಹ್ಯೂಮನ್ಸ್ ಆಫ್ ಬಾಂಬೆ' ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಹಾಗಾದ್ರೆ ಆ ಅಜ್ಜಿ ನೀಡಿರುವ 5 ಉಪಯುಕ್ತ ಸಲಹೆಗಳು ಏನು ಅಂತಿರಾ? ಮೊದಲನೆಯದಾಗಿ

'ನಿಮಗೆ ಅಗತ್ಯವೆನಿಸುವವರೆಗೂ ಒಬ್ಬಂಟಿಯಾಗಿರಿ',

'ನಿಮ್ಮ ಸ್ಮಾರ್ಟ್ ಫೋನ್ ಗಳನ್ನು ದೂರ ಎಸೆಯಿರಿ',

'ಪ್ರತಿ ವರ್ಷವೂ ಒಂದು ತಿಂಗಳ ಸಂಬಳವನ್ನು ಉಳಿಸಿ',

' 'ನಿಮ್ಮ ಜೀವನವನ್ನು ಯಾವಾಗಲೂ ಗಂಭೀರವಾಗಿ ತೆಗೆದುಕೊಳ್ಳಬೇಡಿ'

ಕೊನೆಯದಾಗಿ 'ಯಾರಾದರೂ ನಗುವಿಲ್ಲದವರನ್ನು ನೋಡಿದರೆ ಅವರಿಗೆ ನಿಮ್ಮ ನಗುವನ್ನು ನೀಡಿ' ಎಂದು ಜೀವನಪಾಠ ಹೇಳಿದ್ದಾರೆ.

ಸಾಮಾನ್ಯವಾಗಿ 60 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಜನರು ಇನ್ನೂ ಕೂಡ ಅತ್ಯುತ್ಸಾಹ ತುಂಬಿಕೊಂಡು ಜೀವನ ನಡೆಸುತ್ತಾರೆಂಬುದು ಈ ಅಜ್ಜಿಯ ಮೂಲಕ ಸಾಬೀತಾಗಿದೆ. ಅಜ್ಜಿ ಪಾಠ ಕೇಳಿ ನಗುನಗುತ್ತಾ ಜೀವನ ನಡೆಸಿ..

Edited By : Manjunath H D
PublicNext

PublicNext

22/02/2021 01:04 pm

Cinque Terre

53.02 K

Cinque Terre

2

ಸಂಬಂಧಿತ ಸುದ್ದಿ