ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೋಸೆ ಬಡಿಸುವ ಪರಿ ನಿಜಕ್ಕೂ ಅಚ್ಚರಿ : ವಿಡಿಯೋ ವೈರಲ್

ಮುಂಬೈ: ಮಾಡುವ ಕೆಲಸವನ್ನು ಶ್ರೇದ್ದೆಯಿಂದ ಮಾಡಿದರೆ ಯಾವುದು ಅಸಾಧ್ಯವಲ್ಲ. ಯಾವುದೇ ಕೆಲಸವಾಗಿರಲಿ ಅದನ್ನು ಖುಷಿಯಿಂದ ಮಾಡಬೇಕು ಅಂದಾಗ ನಾವು ನಮ್ಮ ಕ್ಷೇತ್ರದಲ್ಲಿ ಯಶಸ್ಸು ಮತ್ತು ಜನಪ್ರಿಯತೆ ಕಾಣಲು ಸಾಧ್ಯ ಎಂಬ ಮಾತಿಗೆ ಮುಂಬೈ ಮೂಲದ ದೋಸೆ ತಯಾರಕ ಉತ್ತಮ ಉದಾಹರಣೆ.

ದಕ್ಷಿಣ ಭಾರತದ ಆಹಾರವಾದ ದೋಸೆಯನ್ನು ಮುಂಬೈ ಮೂಲದ ವ್ಯಕ್ತಿಯೊಬ್ಬ ವಿಶೇಷವಾಗಿ ಬಡಿಸುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಫೇಸ್ ಬುಕ್ನಲ್ಲಿ ವೈರಲ್ ಆಗಿದ್ದು, ಬರೋಬ್ಬರಿ 84 ಮಿಲಿಯನ್ (8 ಕೋಟಿ 40 ಲಕ್ಷ) ವೀಕ್ಷಣೆಯನ್ನು ದಾಟಿ ಮುನ್ನುಗ್ಗುತ್ತಿದೆ.

ದಕ್ಷಿಣ ಮುಂಬೈನ ಮಂಗಳದಾಸ್ ಮಾರುಕಟ್ಟೆಯಲ್ಲಿರುವ ಶ್ರೀ ಬಾಲಾಜಿ ದೋಸೆ ಕೇಂದ್ರದ ದೋಸೆ ತಯಾರಕ ವಿನೂತನವಾಗಿ ಸರ್ವ್ ಮಾಡುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದ್ದಾರೆ.

ದೋಸೆ ತಯಾರಿಸಿದ ಬಳಿಕ ಅದನ್ನು ನೇರವಾಗಿ ಗ್ರಾಹಕರ ಪ್ಲೇಟ್ ಗೆ ಗಾಳಿಯಲ್ಲಿ ಹಾರಿಬಿಡುವ ಕೌಶಲ್ಯವನ್ನು ದೋಸೆ ತಯಾರಕ ಹೊಂದಿದ್ದಾನೆ.

'ಬಾಸ್ ರೀತಿಯಲ್ಲಿ ದೋಸೆ ಬಡಿಸುವುದು' ಎಂದು ವಿಡಿಯೋಗೆ ಅಡಿಬರಹವಿದೆ. ದೋಸೆ ತಯಾರಿಸಿ ಬಡಿಸುವ ರೀತಿ ನಿಜಕ್ಕೂ ಎಲ್ಲರ ಹುಬ್ಬೇರಿಸುತ್ತದೆ.

Edited By : Manjunath H D
PublicNext

PublicNext

18/02/2021 03:39 pm

Cinque Terre

63.32 K

Cinque Terre

5

ಸಂಬಂಧಿತ ಸುದ್ದಿ