ಮಕ್ಕಳಿಗೆ ಅಪ್ಪ ಅಮ್ಮ ಇಬ್ಬರು ಮುಖ್ಯ ಆದರೆ ಅಪ್ಪನಿಗೆ ಮಗಳೆಂದರೆ ತುಸು ಜಾಸ್ತಿಯೇ ಪ್ರೀತಿ…ಇದು ಸಾಮಾನ್ಯವಾಗಿ ಎಲ್ಲರ ಅನುಭವಕ್ಕೂ ಬಂದಿರುತ್ತದೆ. ಪ್ರತಿ ಅಪ್ಪಂದಿರಿ ಮಗಳ ಮೇಲೆ ತುಸು ಜಾಸ್ತಿಯೇ ಅಕ್ಕರೆ.ವಾತ್ಸಲ್ಯ,ಮಮಕಾರ ಹೊಂದಿರುತ್ತಾರೆ. ಸದ್ಯ ಇಲ್ಲೊಬ್ಬ ತಂದೆ ತನ್ನ ಮಗಳಿಗೆ ಕೇವಲ 5 ಸೆಕೆಂಡಿನಲ್ಲಿ ಜುಟ್ಟುಕಟ್ಟುವ ಮೂಲಕ ಅಪ್ಪ ಮಗಳು ಇಬ್ಬರು ನಗೆಗಡಲಲ್ಲಿ ತೇಲಾಡಿರುವ ವಿಡಿಯೋ ವೈರಲ್ ಆಗಿದೆ.
ಸ್ಮರ್ಟ್ ತಂದೆ ತನ್ನ ಮಗಳಿಗೆ ಜುಟ್ಟು ಹಾಕಲು ವ್ಯಾಕ್ಯೂಮ್ ಕ್ಲೀನರ್ ಬಳಸಿದ್ದಾನೆ. ಕೇವಲ 5 ಸೆಕೆಂಡುಗಳಲ್ಲಿ ಜುಟ್ಟು ಹಾಕಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಹಂಚಿಕೊಂಡಿದ್ದಾರೆ. ವಿಡಿಯೋ ಜೊತೆ ಮೆನ್ ವಿಲ್ ಬಿ ಮೆನ್, ತಂದೆ + ಮಗಳು-ಎಂದೆಂದಿಗೂ ಬೆಸ್ಟೀಸ್ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಬಾರಿ ವೈರಲ್ ಆಗಿದೆ.
PublicNext
14/02/2021 12:11 pm