ಪರಿಸರ ಮಾಲಿನ್ಯದ ಪರಿಣಾಮ ನಮ್ಮ ಆಯಸ್ಸು ಕಡಿಮೆಯಾಗುತ್ತಲೇ ಸಾಗುತ್ತಿದೆ. ನಮ್ಮ ಜೀವಿತಾವಧಿ ೧೦೦ ವರ್ಷ ಎನ್ನುವುದೇ ಡೌಟ್ ಆಗಿದೆ. ಹೀಗಿರುವಾಗ ನೀವು ನೂರನೇ ವರ್ಷದ ಬರ್ತ್ ಡೇ ಆಚರಿಸಿಕೊಳ್ಳುತ್ತಿದ್ದೀರಾ ಅಂತ ಕಲ್ಪನೆ ಮಾಡಿಕೊಳ್ಳಿ. ಹಾಗೆ ಅಜ್ಜಿಯೊಬ್ಬರು ತಮ್ಮ ನೂರನೇ ಬರ್ತ್ ಡೇ ಸಂಭ್ರಮದ ದಿನ ಭರ್ಜರಿ ಡಾನ್ಸ್ ಮಾಡಿ ನೆಟ್ಟಿಗರ ಮನ ಗೆದ್ದಿದ್ದಾರೆ.
ಒಕ್ಲಹೋಮಾದಲ್ಲಿ ಸೆರೆಯಾದ ದೃಶ್ಯ ಇದಾಗಿದ್ದು, ಅಜ್ಜಿ ಉಲ್ಲಾಸದಿಂದ ಸಾಧ್ಯವಾದಷ್ಟು ಹೆಜ್ಜೆ ಹಾಕಿ ಇಲ್ಲಿ ಸೇರಿದವರ ಮೊಗದಲ್ಲಿ ನಗುವರಳಿಸಿದ್ದರು. ಈ ವಿಡಿಯೋವನ್ನು ವೃದ್ಧೆ ಉಳಿದುಕೊಂಡಿರುವ ದಿ ಬೀವರ್ ಕೌಂಟಿ ನರ್ಸಿಂಗ್ ಹೋಮ್ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ.
ವಯಸ್ಸು ಬರೀ ಸಂಖ್ಯೆ ಅಷ್ಟೇ ಎನ್ನುವುದನ್ನು ವೃದ್ಧೆ ಸಾಬೀತು ಮಾಡಿದ್ದಾರೆ. ತಮ್ಮ ಉಲ್ಲಾಸಪೂರ್ಣ ಬದುಕಿನಿಂದಲೇ ಇವರು ಎಲ್ಲರ ಹೃದಯ ಗೆದ್ದಿದ್ದಾರೆ.
PublicNext
11/02/2021 05:26 pm