ಈಗ ಇದ್ದ ವ್ಯಕ್ತಿ ಇನ್ನೊಂದು ಕ್ಷಣದಲ್ಲಿ ಇರುತ್ತಾನೆ ಎಂದು ಹೇಳುವುದೇ ಕಷ್ಟ. ಹೀಗೆ ಸಾವಿನ ದವಡೆಯಿಂದ ಅರೆಕ್ಷಣದಲ್ಲಿ ಪಾರಾದ ಅನೇಕ ವಿಡಿಯೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಕಾಣಬಹುದು. ಇಂತಹದ್ದೇ ಬೆಚ್ಚಿಬೀಳಿಸುವ ದೃಶ್ಯವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಈ ಘಟನೆಯು ಇಸ್ತಾಂಬುಲ್‌ನ ಮಾರುಕಟ್ಟೆ ಪ್ರದೇಶದಲ್ಲಿ ನಿನ್ನೆ ನಡೆದಿದೆ. ಭಾರೀ ಗಾಳಿ ಸಹಿತ ಮಳೆ ಬರುತ್ತಿದ್ದರಿಂದ ಯುವಕನೋರ್ವ ಅಂಗಡಿ ಮುಂದೆ ನಿಂತಿದ್ದ. ಈ ವೇಳೆ ಅಂಗಡಿಯ ಸಿಬ್ಬಂದಿ ಯುವಕನನ್ನು ಒಳಗೆ ಬರುವಂತೆ ಕರೆದಿದ್ದರು. ಅಲ್ಲಿಂದ ಯುವಕ ಹೆಜ್ಜೆ ಕಿತ್ತು ಅಂಗಡಿ ಒಳಗೆ ಕಾಲಿಡುತ್ತಿದ್ದಂತೆ ಪಕ್ಕದ ಕಟ್ಟಡದ ಚಾವಣಿಯೊಂದು ಕುಸಿದು ಬಿದ್ದಿದೆ. ಒಂದು ವೇಳೆ ಯುವಕ ಅಲ್ಲಿಯೇ ನಿಂತಿದ್ದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವಕನನ್ನು ಅಂಗಡಿಯೊಳಗೆ ಕರೆಸಿಕೊಂಡಿದ್ದ ವ್ಯಕ್ತಿಯ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
11/02/2021 10:10 am