ಕೊರೊನಾ ಕಾಲಘಟ್ಟದಲ್ಲಿ ಶಾಲೆಗಳು ಬಂದ್ ಆಗಿ ಒಂದು ವರ್ಷವೇ ಆಗ್ತಾ ಬಂತು. ಈ ನಡುವೆ ಪ್ರಚಂಡ ಪುಟಾಣಿಗಳು ತಮ್ಮ ತುಂಟ ಬುದ್ಧಿಯಿಂದ ಯಾರಿಗೂ ತಿಳಿಯದ, ಯಾರಿಗೂ ಹೊಳೆದೇ ಇಲ್ಲದ ಮಜ ಮಜ ಆವಿಷ್ಕಾರಗಳನ್ನು ಕಂಡು ಹಿಡಿಯುತ್ತಿದ್ದಾರೆ.
ಈ ವಿಡಿಯೋ ನೋಡಿ. ಈ ಇಬ್ಬರೂ ಕಿಲಾಡಿ ಹುಡುಗರು ಒಂದೇ ಸೈಕಲ್ಲನ್ನು ಇಬ್ಬರೂ ಜೊತೆಯಾಗಿ ತುಳಿಯುತ್ತ ಹಾಯಾಗಿ ಮುಂದೆ ಸಾಗುತ್ತಿದ್ದಾರೆ. ಕೊಂಚವೂ ಆಯ ತಪ್ಪದಂತೆ ಸರಿಯಾಗಿ ಬ್ಯಾಲೆನ್ಸ್ ಮಾಡಿಕೊಂಡು ಇಬ್ಬರೂ ಜೊತೆಯಾಗಿ ಸೈಕಲ್ಲಿನ ಪೆಡಲ್ ತುಳಿಯುತ್ತಿದ್ದಾರೆ. ಅಂದ ಮೇಲೆ ಈ ಪ್ರಾಣ ಸ್ನೇಹಿತರ ಮೇಲೆ ಅದೆಷ್ಟರ ಮಟ್ಟಿಗೆ ಪರಸ್ಪರ ಹೊಂದಾಣಿಕೆ, ತಿಳಿವಳಿಕೆ ಇರಬಹುದು ಲೆಕ್ಕ ಹಾಕಿ. ಈ ವಿಡಿಯೋ ಈಗ ಎಲ್ಲ ಕಡೆ ವೈರಲ್ ಆಗಿದ್ದು ನೋಡೆದವರು ಬಿದ್ದು ಬಿದ್ದು ಮನಬಿಚ್ಚಿ ನಗುತ್ತಿದ್ದಾರೆ.
PublicNext
28/01/2021 01:27 pm