ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈಲು ಹಳಿ ಮೇಲೆ ಮಲಗಿ ಕ್ಯಾಮೆರಾಗೆ ಪೋಸ್ ಕೊಟ್ಟ ಮಹಿಳೆ..!

ಇಯರ್‌ಫೋನ್ ಹಾಕಿಕೊಂಡು ನಡೆದು ಹೊತ್ತಿದ್ದ ಆರೋಗ್ಯ ಕಾರ್ಯಕರ್ತೆಯೊಬ್ಬರು ರೈಲಿಗೆ ಸಿಲುಕಿ ಪ್ರಾಣ ಬಿಟ್ಟ ವಿಡಿಯೋ ಭಾರೀ ವೈರಲ್ ಆಗಿತ್ತು. ಆದರೆ ಇಂತಹ ಅನೇಕ ಅನಾಹುತಗಳು ನಡೆದರೂ ಕೆಲವರಿಗೆ ಭಯ ಎನ್ನುವುದೇ ಮೂಡಿಲ್ಲ.. ಇದಕ್ಕೆ ನಿದರ್ಶನ ಎನ್ನುವಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಯುಕೆ ರೈಲ್ವೆ ನೆಟ್ವರ್ಕ್ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಇಂತಹ ದುಸ್ಸಾಹಸಕ್ಕೆ ಕೈ ಹಾಕದಂತೆ ಎಚ್ಚರಿಕೆ ನೀಡಿದೆ. ಈ ವಿಡಿಯೋದಲ್ಲಿ ರೈಲು ಬರುವುದಕ್ಕೂ ಕೆಲ ನಿಮಿಷಗಳ ಮುನ್ನ ರಸ್ತೆಗೆ ಗೇಟ್‌ ಹಾಕಿರುವುದನ್ನು ಕಾಣಬಹುದು. ಈ ವೇಳೆ ಇಬ್ಬರು ಮಹಿಳೆಯರು ವಾಹನದಿಂದ ಹೊರ ಬಂದು ರೈಲು ಹಳಿಯ ಮೇಲೆ ನಿಲ್ಲುತ್ತಾರೆ. ಬಳಿಕ ಓರ್ವ ಮಹಿಳೆ ಹಳಿಯ ಮೇಲೆ ಮಲಗಿ ಕ್ಯಾಮೆರಾಗೆ ಪೋಸ್ ಕೊಡುವುದನ್ನು ಕಾಣಬಹುದು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮಹಿಳೆಯ ವಿರುದ್ಧ ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ.

Edited By : Manjunath H D
PublicNext

PublicNext

24/01/2021 04:20 pm

Cinque Terre

116.88 K

Cinque Terre

3

ಸಂಬಂಧಿತ ಸುದ್ದಿ