ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವ್ಯಾಘ್ರಗಳ ಕಾಳಗ- ಬೆಚ್ಚಿಬಿದ್ದ ಪ್ರವಾಸಿಗರು..!

ಬಲಿಷ್ಠರ ನಡುವಿನ ಕಾಳಗ ಭಾರೀ ಭಯಾನಕ, ರೋಮಾಂಚಕವಾಗಿರುತ್ತೆ... ಎರಡು ಹಾವುಗಳ ನಡುವಿನ ಹೋರಾಟವನ್ನು ನೋಡಿದ್ದೇವೆ, ಕೇಳಿದ್ದೇವೆ. ಅಂಥೆ ಎರಡು ಹುಲಿಗಳ ನಡುವಿನ ಕಾಳಗದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಇಂತಹ ಅಪರೂಪದ ವಿಡಿಯೋ ಟ್ವೀಟ್ ಮಾಡಿದ್ದು, "ಕ್ಲಾಷ್ ಆಫ್ ದಿ ಟೈಟಾನ್ಸ್, ಭಾರತದಿಂದ. ವಾಟ್ಸಾಪ್‌ನಿಂದ ಬಂದ ವಿಡಿಯೋ'' ಎಂದು ಅಧಿಕಾರಿ ಬರೆದುಕೊಂಡಿದ್ದಾರೆ. ಆದರೆ ವಿಡಿಯೋವನ್ನು ಎಲ್ಲಿ ಮತ್ತು ಯಾವಾಗ ತೆಗೆದುಕೊಳ್ಳಲಾಗಿದೆ ಎಂಬುದು ತಿಳಿದಿಲ್ಲ. ಅಭಯಾರಣ್ಯದ ಮೂಲಕ ಹಾದುಹೋಗುತ್ತಿದ್ದ ಚಲಿಸುವ ವಾಹನದಿಂದ ಇದನ್ನು ಚಿತ್ರೀಕರಿಸಲಾಗಿದೆ.

ಈ ವಿಡಿಯೊದಲ್ಲಿ ಎರಡು ಬಲಿಷ್ಠ ಹುಲಿಗಳು ಕಾಡಿನ ಹಾದಿಯಲ್ಲಿ ಅಕ್ಕಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡುಬರುತ್ತದೆ. ಸ್ವಲ್ಪ ಸಮಯದಲ್ಲಿ ಮಾರ್ಗ ಬದಲಿಸುವ ಒಂದು ಹುಲಿ ಮತ್ತೊಂದು ಹುಲಿ ಮೇಲೆ ಎರಗುತ್ತದೆ. ಸ್ವಲ್ಪ ಸಮಯ ಜಗಳದ ಬಳಿಕ ಒಂದು ಶರಣಾಗುತ್ತದೆ. ಈ ಮೂಲಕ ಎರಡೂ ಹುಲಿಗಳು ತಮ್ಮ ಪಾಡಿಗೆ ತಾವು ತೆರಳುತ್ತವೆ.

Edited By : Nagesh Gaonkar
PublicNext

PublicNext

21/01/2021 06:40 pm

Cinque Terre

89.28 K

Cinque Terre

1

ಸಂಬಂಧಿತ ಸುದ್ದಿ