ಬೆಂಕಿ, ಬಿರುಗಾಳಿ, ನೀರು, ಪ್ರವಾಹ ಇವುಗಳೊಂದಿಗೆ ಆಟ ಆಡಬೇಡ ಅಂತಾ ಹಿರಿಯರು ಹೇಳಿದ್ದಾರೆ. ಈ ಮಾತನ್ನ ಅವರು ಸುಮ್ಸುಮ್ನೆ ಹೇಳಿಲ್ಲ. ಅಲ್ಲಿ ಭಾರೀ ಅಪಾಯ ಇರುತ್ತೆ ಎಂಬ ಕಾರಣಕ್ಕೆ ಹೇಳಿರುತ್ತಾರೆ.
ಬಿರುಗಾಳಿಯೊಂದಿಗೆ ಹುಡುಗಾಟವಾಡಲು ಹೋದ್ರೆ ಅದು ನಮ್ಮನ್ನ ಏನು ಮಾಡಬಹುದು ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿ. ಬಹಿರಂಗ ಕಾರ್ಯಕ್ರಮವೊಂದಕ್ಕೆ ಕುರ್ಚಿಗಳನ್ನ ಹಾಕಲಾಗಿತ್ತು. ಆಗ ಅಲ್ಲಿ ರೆಮ್ಮನೇ ಬಂದ ಈ ಸುಳಿಗಾಳಿ ಅಥವಾ ದೆವ್ವಗಾಳಿ ಅಲ್ಲಿ ಹಾಕಲಾಗಿದ್ದ ಕುರ್ಚಿಗಳನ್ನೆಲ್ಲ ಎತ್ತಿ ಗರ ಗರ ಸುತ್ತಾಡಿಸಿ ಎಲ್ಲೆಲ್ಲೋ ಹೋಗಿ ಬೀಳುವಂತೆ ಮಾಡಿದೆ. ಇದನ್ನ ಕಂಡ ಅಕ್ಕ ಪಕ್ಕದವರು ಏನನ್ನೂ ಮಾಡಲಾಗದೇ, ಸುಳಿಗಾಳಿಯ ಹತ್ತಿರವೂ ಸುಳಿಯಲಾಗದೇ ತೆಪ್ಪಗೆ ನಿಂತಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಅದಕ್ಕೆ ಹೇಳೋದು ಪ್ರಕೃತಿಯ ಅಗಾಧ ಶಕ್ತಿಯ ಮುಂದೆ ನಾವೇನೇನೂ ಅಲ್ಲ. ಇಷ್ಟಿದ್ದರೂ ನಾನೇ ಎಲ್ಲ ಎನ್ನುತ್ತ ಮೆರೆದಾಡುತ್ತೇವೆ ಅಲ್ಲವೇ?
PublicNext
17/01/2021 09:00 pm