ಕಷ್ಟ ಬಂದಾಗ ನಮ್ಮವರೂ ಬೇಕಾಗುತ್ತಾರೆ. ನಮ್ಮವರಲ್ಲದವರೂ ನಮ್ಮೊಂದಿಗೆ ಹೊಂದಿಕೊಂಡು ಹೋಗ್ತಾರೆ. ಎಲ್ಲದರಲ್ಲೂ ಅನುಕೂಲ ಇದ್ದಾಗ ನಮ್ಮವರೇ ನಮ್ಮ ಕಣ್ಣಿಗೆ ಕಾಣದಾಗುತ್ತರೆ. ಈ ಮಾತಿಗೆ ಬೆಸ್ಟ್ ಉದಾಹರಣೆ ಇಲ್ಲಿದೆ.
ನಾಯಿ ಬೆಕ್ಕು ಸಹಜವಾಗಿ ಒಂದನ್ನೊಂದು ಸಹಿಸಿಕೊಳ್ಳಲಾಗದ ಪ್ರಾಣಿಗಳು. ಬೆಕ್ಕಿಗಿಂತ ಬಲಶಾಲಿಯಾದ ನಾಯಿ ಬೆಕ್ಕನ್ನು ಕಂಡಾಗಲೆಲ್ಲ ಗುರ್ರ್ ಅನ್ನುತ್ತೆ. ಆದ್ರೆ ಕಷ್ಟ ಬಂದಾಗ ಯಾವುದೇ ಬದ್ಧ ವೈರತ್ವದ ಪ್ರಾಣಿಯಾಗಲಿ ಹೊಂದಿಕೊಂಡು ಹೋಗುತ್ತೆ ಅನ್ನೋದಕ್ಕೆ ಇದೇ ಸಾಕ್ಷಿ. ಇಲ್ಲಿರುವ ಬೆಕ್ಕು ಹಾಗೂ ನಾಯಿ ಚಳಿ ತಾಳದೇ ಒಲೆ ಮುಂದೆ ಅಕ್ಕ ಪಕ್ಕ ಕೂತು ಮೈ ಬೆಂಕಿಯ ಕಾವು ಪಡೆಯುತ್ತಿವೆ. ಮನುಷ್ಯರಾದ ನಮ್ಮಲ್ಲೂ ಈ ಗುಣ ಬರಲೇ ಬೇಕಲ್ಲವೇ?
PublicNext
11/01/2021 03:54 pm