ಟಿವಿ ಮೀಡಿಯಾ ಅನ್ನೋದು ಪ್ರಭಾವಿ ಮಾಧ್ಯಮ. ಅದರ ಪರಿಣಾಮ ಮನುಷ್ಯರ ಮೇಲಷ್ಟೇ ಅಲ್ಲ. ಮನೆಯಲ್ಲಿನ ಸಾಕು ಪ್ರಾಣಿಗಳ ಮೇಲೂ ಆಗುತ್ತೆ. ಅದಕ್ಕೆ ಮತ್ತೊಂದು ಉದಾಹರಣೆ ಇಲ್ಲಿದೆ ನೋಡಿ.
ಕುದುರೆ ಓಡೋದನ್ನ ಟಿವಿಯಲ್ಲಿ ನೋಡಿದ ನಾಯಿ ತಾನೂ ಕೂಡ ಟೇಬಲ್ ಮೇಲೆ ಮುಂಗಾಲಿಟ್ಟು ಹಿಂಗಾಲಿನಿಂದ ರಭಸವಾಗಿ ನಿಂತಲ್ಲೇ ಓಡಿದೆ. ಈ ವಿಡಿಯೋವನ್ನ ಐಪಿಎಸ್ ಅಧಿಕಾರಿ ಪಂಕಜ್ ನಯನ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಟಿವಿ ನೋಡುತ್ತಲೇ ಡ್ಯಾನ್ಸ್ ಮಾಡ್ತಿದ್ದ ಬಾಲೆಯೊಬ್ಬಳು ಟಿವಿಯನ್ನೇ ಕೆಡವಿಬಿಟ್ಟಿದ್ದಳು. ಆ ವಿಡಿಯೋ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಸದ್ಯ...ನಾಯಿ ಹಾಗೆ ಮಾಡಿಲ್ವಲ್ಲಾ..
PublicNext
07/01/2021 09:32 am