ನಾವು, ನೀವು ಪ್ರಾಣಿ ಪಕ್ಷಿಗಳನ್ನು ನೋಡಿ ಕಲಿಯುವುದು ತುಂಬಾನೇ ಇದೆ ಎಂದರೆ ತಪ್ಪಾಗದು. ಹಣ, ಆಸ್ತಿ ಹಿಂದೆ ಓಟ ಕಿತ್ತವರು ನಾವು. ಮಾರ್ಗಮಧ್ಯದಲ್ಲಿ ಸಿಗುವ ಅಸಹಾಯಕರನ್ನು ಮರೆತು ಮುಂದೆ ಸಾಗುತ್ತೇವೆ. ಆದರೆ ಪ್ರಾಣಿ- ಪಕ್ಷಿಗಳು ಹಾಗಲ್ಲ ನೋಡಿ. ಇದಕ್ಕೆ ನಿದರ್ಶನ ಎನ್ನುವಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕುಕ್ಕು ಜಾತಿಗೆ ಸೇರಿದ ದೊಡ್ಡ ಹಕ್ಕಿ ಬಳ್ಳಿಯೊಂದರ ಮೇಲೆ ಕುಳಿತುಕೊಂಡಿರುತ್ತದೆ. ಈ ವೇಳೆ ಪುಟ್ಟ ಹಕ್ಕಿಯೊಂದು ಆಹಾರ ಸಂಗ್ರಹಿಸಿ ದೊಡ್ಡ ಪಕ್ಷಿಗೆ ನೀಡುತ್ತದೆ. ''ಹಾರಲಾಗದ ದೊಡ್ಡ ಹಕ್ಕಿಗೆ ಪುಟ್ಟ ಹಕ್ಕಿಯೊಂದು ಆಹಾರ ತಿನಿಸುತ್ತಿರುವ ದೃಶ್ಯ'' ಎಂದು ಟ್ವೀಟ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ವಸಂತ್ ಸಿಂಗ್ ಎಂಬವರು ಟ್ವೀಟ್ ಮಾಡಿದ್ದು, ''ಹಾರಲು ಆಗದ ದೊಡ್ಡ ಹಕ್ಕಿಗೆ ಪುಟ್ಟ ಹಕ್ಕಿಯೊಂದು ಆಹಾರ ನೀಡುತ್ತಿದೆ. ಪಕ್ಷಿಗಳ ಸಮಾಜದಲ್ಲಿ ವೃದ್ಧ ಆಶ್ರಮ ಎಂಬುದಿಲ್ಲ'' ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಅನೇಕ ನೆಟ್ಟಿಗರು ಲೈಕ್ ಮಾಡಿದ್ದು, ಕೆಲವರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
PublicNext
05/01/2021 02:04 pm