ವರ ನಟ ರಾಜಕುಮಾರ್ ಅವರು ಎಮ್ಮೆ ಮೇಲೆ ಕುಳಿತು ''ಯಾರೇ ಕೂಗಾಡಲಿ, ಊರೇ ಹೋರಾಡಲಿ. ನಿನ್ನ ನೆಮ್ಮದಿಗೆ ಭಂಗವಿಲ್ಲ, ಎಮ್ಮೆ ನಿನಗೆ ಸಾಟಿಯಿಲ್ಲ'' ಎಂದು ಹಾಡುವ ದೃಶ್ಯವನ್ನು ನಾವು ನೀವು ನೋಡಿದ್ದೇವೆ. ಆದರೆ ಎಮ್ಮೆ ಡಾನ್ಸ್ ಮಾಡಿದ್ದನ್ನು ಎಲ್ಲಾದ್ರೂ ನೋಡಿದ್ದೇವಾ? ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವೈರಲ್ ವಿಡಿಯೋದಲ್ಲಿ ಎಮ್ಮೆ ತನ್ನ ಮಾಲೀಕಳೊಂದಿಗೆ ನೃತ್ಯ ಮಾಡುವುದನ್ನು ನೋಡಬಹುದಾಗಿದೆ. ಈ ವೈರಲ್ ವಿಡಿಯೋವನ್ನು ಹಿಮಾಚಲ ಪ್ರದೇಶದ ಹಳ್ಳಿಯೊಂದರಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ.
ಸಾಮಾನ್ಯವಾಗಿ ಎಮ್ಮೆಗಳು ತನ್ನ ಭಾರವನ್ನು ಹೊತ್ತು ಮುಂದೆ ಸಾಗುವುದೇ ಕಷ್ಟ. ಹೀಗಿರುವಾಗ ಅದು ನೃತ್ಯ ಮಾಡಿರುವುದು ಅದ್ಭುತವಾಗಿದೆ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಅನೇಕ ನೆಟ್ಟಿಗರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
PublicNext
31/12/2020 11:38 am