ಮದುವೆಗೂ ಮುನ್ನ ಹಾಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿನದಂದು ಜೋಡಿಗಳು ಫೋಟೋ ಶೂಟಿಂಗ್ ಮಾಡಿಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿದೆ.
ಒಮ್ಮೊಮ್ಮೆ ನವ ಜೋಡಿಯು ಸಹಾಸಕ್ಕೆ ಮುಂದಾಗಿ ಭಾರೀ ಅನಾಹುತಕ್ಕೂ ಒಳಗಾದ ಉದಾಹರಣೆಯೂ ಉಂಟು. ಇಂತಹದ್ದೇ ಪಜೀತಿಗೆ ಸಿಲುಕಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕಾಲುವೆ ದಾಟಲು ಅಡ್ಡಲಾಗಿ ತೆಂಗಿನ ದಿಣ್ಣೆಯೊಂದನ್ನು ಹಾಕಲಾಗಿತ್ತು. ಇದರ ಮೇಲೆ ನಿಂತು ನವ ಜೋಡಿ ಕ್ಯಾಮೆರಾಗೆ ಪೋಸ್ ನೀಡುತ್ತಿದ್ದರು.
ಫೋಟೋ ಶೂಟ್ ಬಳಿಕ ಅಲ್ಲಿಂದ ವಾಪಸ್ ಆಗುವಾಗ ವಧು ತನ್ನ ಪತಿಯ ಪಂಚೆ ಮೇಲೆ ಕಾಲಿಟ್ಟಿದ್ದಾಳೆ. ಪರಿಣಾಮ ಆಯ ತಪ್ಪಿದ ವರ ನೀರಿಗೆ ಹಾರಿದ್ದಾನೆ.
ಅಷ್ಟೇ ಅಲ್ಲದೆ ಆತನನ್ನು ಹಿಡಿದ್ದ ವಧು ಕೂಡ ಕೆಳಗೆ ಬಿದ್ದಿದ್ದಾಳೆ. ಅದೃಷ್ಟವಶಾತ್ ಜೋಡಿಗೆ ಯಾವುದೇ ಹಾನಿಯಾಗಿಲ್ಲ.
ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
PublicNext
19/12/2020 07:34 pm