ನಾಯಿ ಮನುಷ್ಯನಿಗೆ ಕಚ್ಚಿದ್ರೆ ಅದು ಸುದ್ದಿ ಅಲ್ಲ. ಮನುಷ್ಯ ನಾಯಿಗೆ ಕಚ್ಚಿದ್ರೆ ಅದು ಸುದ್ದಿ. ಈ ಮಾತನ್ನ ನೀವು ಕೇಳಿರ್ತೀರಿ. ಆದ್ರೆ ಅದು ಕೂಡ ಈಗ ಹಳೆಯದಾಯ್ತು. ನಾಯಿಗಳು ಪರಸ್ಪರ ಜಗಳ ಮಾಡಿದ್ರೆ ಸುದ್ದಿ ಅಲ್ಲ. ಆದ್ರೆ ನಾಯಿಗಳೊಂದಿಗೆ ಫೈಟ್ ಮಾಡಿದ್ರೆ ಅದು ಸುದ್ದಿ.
ಈಗ ಅದೇ ಆಗಿಬಿಟ್ಟಿದೆ ನೋಡಿ. ಪಾನಮತ್ತ ಯುವಕನೊಬ್ಬ ರಸ್ತೆಯಲ್ಲಿ ಓಲಾಡುತ್ತ, ಜೋಲಾಡುತ್ತ ಹೋಗುತ್ತಿದ್ದಾನೆ. ಈ ವೇಳೆ ಬೀದಿ ನಾಯಿಗಳು ಅವನ ವರ್ತನೆ ಕಂಡು ಬೆನ್ನತ್ತಿ ಬೊಗಳಲಾರಂಭಿಸಿವೆ. ಇದಕ್ಕೆ ಕುಪಿತನಾದ ಆತ ವಾಪಸ್ ನಾಯಿಗಳೊಂದಿಗೆ ಟೇಕ್ವಾಂಡೋ, ಕರಾಟೆ, ಮತ್ತಿತರ ಕ್ರೀಡೆಗಳನ್ನೇ ಆಡಿದ್ದಾನೆ.
ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಕುಡುಕನ ಚೇಷ್ಟೆ ಕಂಡ ನೆಟ್ಟಿಗರು ಮೈತುಂಬಾ ನಕ್ಕು, ಯಾರ್ ಗುರು ಇವನು? ಎನ್ನುತ್ತಿದ್ದಾರೆ.
PublicNext
16/12/2020 02:57 pm