ವಿಜಯನಗರ: ಪೂಜೆ, ಆರಾಧನಾ ವಿಚಾರಕ್ಕೆ ಉತ್ತರಾಧಿ ಮಠದ ಭಕ್ತರು ಮತ್ತು ಮಂತ್ರಾಲಯ ಮಠದ ಭಕ್ತರ ಮಧ್ಯೆ ವಾಗ್ವಾದ ನಡೆದಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯ ತುಂಗಭದ್ರಾ ನದಿಯ ಶ್ರೀ ನರಹರಿತೀರ್ಥರ ಬೃಂದಾವನದಲ್ಲಿ ನಡೆದಿದೆ.
ಆರಾಧನಾ ಮಹೋತ್ಸವ ನಿಮಿತ್ತ ಆರಾಧನಾ ವಿಚಾರಕ್ಕೆ ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ನ.9ರಂದು ತೀರ್ಪು ನೀಡಿತ್ತು. ಇದನ್ನ ವಿರೋಧಿಸಿ ಉತ್ತರಾಧಿ ಮಠದವರು ಧಾರವಾಡ ಹೈಕೋರ್ಟ್ ನಲ್ಲಿ ಅಪೀಲ್ ಸಲ್ಲಿಕೆ ಮಾಡಿದ್ರು. ಇದರ ಮಧ್ಯೆ ಧಾರವಾಡ ಹೈಕೋರ್ಟ್ ತೀರ್ಪು ಬರೋದಕ್ಕೂ ಮೊದಲೇ ಮಂತ್ರಾಲಯ ಮಠದವರು ಹಂಪಿ ಬಳಿಯಿರೋ ಶ್ರೀ ನರಹರಿ ತೀರ್ಥರ ಸನ್ನಿಧಾನಕ್ಕೆ ಬಂದು ಆರಾಧನಾ ಪೂಜೆ ಸಲ್ಲಿಕೆ ಮಾಡಿದ್ದಾರೆ. ಇದು ಉತ್ತರಾಧಿ ಮಠದ ಭಕ್ತರ ಆಕ್ರೋಶಕ್ಕೆ ಕಾರಣ ಆಗಿದ್ದು ಮಧ್ಯಾಹ್ನ ವೇಳೆಗೆ ಮತ್ತೆ ಧಾರವಾಡ ಹೈಕೋರ್ಟ್ ನಿಂದ ಉತ್ತರಾಧಿ ಮಠದವರೇ ಪೂಜೆ, ಆರಾಧನೆ ಮಾಡಬೇಕು ಅಂತ ತೀರ್ಪು ಪ್ರಕಟಗೊಂಡಿದೆ.
ಬಳಿಕ ಹೊಸಪೇಟೆಯಲ್ಲಿರೋ ಉತ್ತರಾಧಿ ಮಠದ ಭಕ್ತರು ಪೂಜೆ ಸಲ್ಲಿಕೆಗೆ ಹಂಪಿಯಲ್ಲಿರೋ ಶ್ರೀನರಹರಿ ತೀರ್ಥರ ಸನ್ನಿಧಾನಕ್ಕೆ ಭಕ್ತರು ಬಂದಿದ್ರು. ಈ ವೇಳೆ ಶ್ರೀನರಹರಿ ತೀರ್ಥರ ಸನ್ನಿಧಾನಕ್ಕೆ ಬೀಗ ಹಾಕಿ ಕೀ ಕೊಡದೇ ಮಂತ್ರಾಲಯ ಮಠದ ಭಕ್ತರು ಹೋಗಿದ್ರು. ಬಳಿಕ ಶ್ರೀ ನರಹರಿತೀರ್ಥರ ಸನ್ನಿಧಾನಕ್ಕೆ ಪೂಜೆಗೆ ಬಂದ ಉತ್ತರಾಧಿಮಠದ ಭಕ್ತರಿಗೆ ಕೀ ಕೊಡದೇ ಮಂತ್ರಾಲಯ ಮಠದ ಭಕ್ತರು ಹೋಗಿದ್ರು. ಈ ವೇಳೆ ಕೀ ಕೊಡಿಸಿ ಅಂತ ಉತ್ತರಾಧಿ ಮಠದವರು ಪೊಲೀಸರ ಬಳಿ ಕೇಳಿದ್ರು. ಇದೇ ವೇಳೆ ಪೊಲೀಸರು ಉತ್ತರಾಧಿ ಮಠದವರು, ಮಂತ್ರಾಲಯ ಮಠದ ಭಕ್ತರ ಮಧ್ಯೆ ಜಟಾಪಟಿಯೇ ನಡೆದು ಹೋಯ್ತು.
ಈ ವೇಳೆ ಮಾತಾಡಿದ ಪೊಲೀಸರು ನಮ್ಮದೇನಿದ್ರು ಬಂದೋಬಸ್ತ್ ಕೊಡೋದಷ್ಟೇ. ಶ್ರೀ ನರಹರಿ ತೀರ್ಥರ ಸನ್ನಿಧಾನಕ್ಕೆ ಕೀ ಲಾಕ್ ಮಾಡಿದ್ದನ್ನ ಕೊಡಿಸೋದಲ್ಲ ಅಂತ ಹೇಳಿದ್ರು. ಸನ್ನಿಧಾನಕ್ಕೆ ಹಾಕಿದ್ದ ಕೀ ವಿಚಾರದಲ್ಲಿ ವಾಗ್ವಾದ, ವಿವಾದ ನಡೆಯುತ್ತಿರೋ ವೇಳೆ ಎರಡು ಕಡೆಯವರು ಮೊಬೈಲ್ ಗಳಲ್ಲಿ ವಿಡಿಯೋ ಮಾಡಿಕೊಳ್ತಿದ್ರು.
ನರಹರಿ ತೀರ್ಥರ ಪೂಜೆಗಾಗಿ ಎರಡು ಮಠಗಳ ನಡುವೆ ಜಟಾಪಟಿ ವಿಚಾರಕ್ಕೆ ಸಂಬಂಧಿಸಿದಂತೆ ಹಂಪಿಯ ನಡುಗಡ್ಡೆಯಲ್ಲಿರೋ ನರಹರಿತೀರ್ಥದ ಬೃಂದಾವನಕ್ಕೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಒಬ್ಬರು ಪಿಐ, ಒಬ್ಬರು ಪಿಎಸ್ಐ, 4 ಎಎಸ್ಐ ಸೇರಿದಂತೆ 30 ಜನ HC/ PC ಗಳು, ಒಂದು ಡಿಎಆರ್ ತುಕಡಿ ನಿಯೋಜನೆ ಮಾಡಿದ ಪೊಲೀಸರು, ವಿಜಯನಗರ ಎಸ್ಪಿ ಡಾ. ಶ್ರೀಹರಿಬಾಬು ಬಿಎಲ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
"ಎರಡೂ ಮಠಗಳ ಹಿರಿಯರು ಕುಳಿತು ಮಾತಾಡಬೇಕು. ಅಂದಾಗ ಮಾತ್ರ ಎರಡು ಮಠಗಳ ಮಧ್ಯೆ ಇರುವ ವ್ಯಾಜ್ಯ ಕ್ಲೀಯರ್ ಮಾಡಿಕೊಳ್ಳಬಹುದು. ಆ ನಿಟ್ಟಿನಲ್ಲಿ ಕೆಲಸ ಮಾಡಿ ಆದಷ್ಟು ಬೇಗ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳುತ್ತೇವೆ ಎಂದು
ಉತ್ತರಾಧಿಮಠದ ಪರ ವಕೀಲರಾದ ರಮೇಶ್ ಕರ್ಣಂ ತಿಳಿಸಿದ್ದಾರೆ.
PublicNext
21/01/2025 11:19 am