ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಕಾರವಾರ ಕಡಲತೀರದಲ್ಲಿ ಗ್ರೀನ್ ಸೀ ಟರ್ಟಲ್ ಕಳೇಬರ ಪತ್ತೆ

ಕಾರವಾರ: ನಗರದ ಅಲಿಗದ್ದಾ ಕಡಲತೀರದಲ್ಲಿ ಬೃಹತ್ ಗಾತ್ರದ ಕಡಲಾಮೆಯ ಕಳೇಬರ ಪತ್ತೆಯಾಗಿದೆ.

ಸ್ಥಳೀಯ ಮೀನುಗಾರರು ಸಮುದ್ರದ ದಡದಲ್ಲಿದ್ದ ಕಡಲಾಮೆಯ ಕಂಡು ಅರಣ್ಯ ಇಲಾಖೆಗೆ ಮಾಹಿತಿ ಒದಗಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಕರಾವಳಿ ಕಾವಲು ಪಡೆ ಪೊಲೀಸರು, ಕಡಲಾಮೆಯ ಕಳೇಬರವನ್ನ ನೀರಿನಿಂದ ಮೇಲೆ ತಂದು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.

ಇದು ಗ್ರೀನ್ ಸೀ ಟರ್ಟಲ್ ಪ್ರಜಾತಿಯದಾಗಿದ್ದು, ಸಹಜವಾಗಿ ಸಾವನ್ನಪ್ಪಿರುವುದಾಗಿ ಮರಣೋತ್ತರ ಪರೀಕ್ಷೆಯ ಬಳಿಕ ವೈದ್ಯರು ದೃಢಪಡಿಸಿದ್ದಾರೆ.

Edited By : Manjunath H D
PublicNext

PublicNext

11/09/2022 11:56 am

Cinque Terre

40.98 K

Cinque Terre

0