ಕಾರವಾರ: ವೃದ್ಧೆಯೋರ್ವರ ಹೊಟ್ಟೆಯಲ್ಲಿದ್ದ ಸುಮಾರು 10 ಕೆಜಿಯ ಬೃಹತ್ ಗಡ್ಡೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದು ಭಟ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯರು ವೃದ್ಧೆಯನ್ನ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಕುಮಟಾ ಬಗ್ಗೋಣ ಮೂಲದ 62 ವರ್ಷದ ಸಾವಿತ್ರಿ ನಾಯ್ಕ ಎನ್ನುವವರು ಕಳೆದ ಕೆಲ ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಈ ಬಗ್ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ವೈದ್ಯರ ಶಿಫಾರಸ್ಸಿನ ಮೇರೆಗೆ ಸ್ಕ್ಯಾನಿಂಗ್ ಮಾಡಿದಾಗ ಹೊಟ್ಟೆಯಲ್ಲಿ ಗಡ್ಡೆ ಇರುವುದು ಕಂಡುಬಂದಿತ್ತು. ಬಳಿಕ ಸಂಬಂಧಿಕರ ಸಲಹೆ ಮೇರೆಗೆ ಭಟ್ಕಳಕ್ಕೆ ಬಂದು, ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.
ಸ್ತ್ರೀರೋಗ ತಜ್ಞ ಡಾ.ಸಹನ್ ಎಸ್.ಕುಮಾರ್ ಅವರು ತಪಾಸಣೆ ನಡೆಸಿ, ಇಂದು ಶಸ್ತ್ರಚಿಕಿತ್ಸೆ ನಡೆಸಿದಾಗ ಹೊಟ್ಟೆಯಲ್ಲಿ ಸುಮಾರು 10 ಕೆಜಿಯ ಗಡ್ಡೆ ಪತ್ತೆಯಾಗಿದೆ. ಸದ್ಯ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಗಡ್ಡೆಯನ್ನ ಹೊರತೆಗೆಯಲಾಗಿದ್ದು, ವೃದ್ಧೆ ಚೇತರಿಸಿಕೊಳ್ಳುತ್ತಿದ್ದಾರೆ.
PublicNext
13/09/2022 04:39 pm