ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಸಿದ್ದಾಪುರ ಫಾಲ್ಸ್ ನಲ್ಲಿ ಬಿದ್ದು ಕಣ್ಮರೆಯಾಗಿದ್ದವನ ಶವ ಪತ್ತೆ!!

ಕಾರವಾರ: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಹುಕ್ಕಳಿ ಬಳಿಯ ಗುಂಡಿಗದ್ದೆ ಫಾಲ್ಸ್ ನೋಡಲು ಬಂದು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನಾಪತ್ತೆಯಾಗಿದ್ದ ಯುವಕನ ಶವ ಪತ್ತೆಯಾಗಿದೆ.

ಕೋಲಾರ ಮೂಲದ ರಾಘವೇಂದ್ರ ಗೌಡ ಎನ್ನುವಾತ ತಂಡಾಗುಂಡಿ ಪಂಚಾಯಿತಿ ವ್ಯಾಪ್ತಿಯ ಹುಕ್ಕಳಿ ಬಳಿಯ ಗುಂಡಿಗದ್ದೆ ಫಾಲ್ಸ್ ನೋಡಲು 13 ಮಂದಿಯ ಜೊತೆ ಪ್ರವಾಸಕ್ಕೆ ಬಂದಿದ್ದರು. ಆದರೆ ಯಾವುದೇ ಸಮರ್ಪಕ ರಸ್ತೆ ಸೇರಿದಂತೆ ಸುರಕ್ಷತೆ ಬಗ್ಗೆ ತಿಳಿಯದೆ ಫಾಲ್ಸ್ ಬಳಿ ಇಳಿದಾಗ ರಾಘವೇಂದ್ರ ಆಯತಪ್ಪಿ ಬಿದ್ದು ನಾಪತ್ತೆಯಾಗಿದ್ದ.

ಸದ್ಯ ಸ್ಥಳೀಯರ ಸಹಕಾರದಲ್ಲಿ ನಿರಂತರ ಹುಡುಕಾಟ ನಡೆಸಿ ಮೃತದೇಹ ಪತ್ತೆ ಮಾಡಲಾಗಿದ್ದು, ಜಲಪಾತದಿಂದ ಶವವನ್ನು ಮೇಲೆತ್ತಿದ್ದಾರೆ. ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagesh Gaonkar
PublicNext

PublicNext

12/09/2022 08:59 am

Cinque Terre

38.54 K

Cinque Terre

0

ಸಂಬಂಧಿತ ಸುದ್ದಿ