ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಶಿರ್ವದ  ಐವನ್ ಡಿಶೋಜಾಗೆ ಚಿನ್ನದ ಪದಕ

ಕಾಪು: ಮೈಸೂರಿನಲ್ಲಿ‌ ನಡೆದ ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಉಡುಪಿಯ ಶಿರ್ವ ಗ್ರಾಮದ ಐವನ್ ಡಿಸೋಜಾ ಚಿನ್ನದ ಪದಕ ಗಳಿಸುವ ಮೂಲಕ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಅಯ್ಕೆಯಾಗಿದ್ದಾರೆ.

19 ವರ್ಷದ ಐವನ್ ಡಿಸೋಜಾ 59 ಕೆಜಿ ವಿಭಾಗದ ಸಬ್ ಜ್ಯೂನಿಯರ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.ಶಿರ್ವ ಸೈಂಟ್ ಮೇರಿಸ್ ಕಾಲೇಜಿನ‌ ದ್ವೀತಿಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿದ್ದಾರೆ. ಶಿರ್ವ ಪಟ್ಟಣದಲ್ಲಿರುವ  ಡ್ರೀಮ್ ಜಿಮ್ ನಲ್ಲಿ ಪ್ರತಿ ನಿತ್ಯ ತರಭೇತಿ ಪಡೆಯುತ್ತಿದ್ದು,ಮೊದಲ ಪ್ರಯತ್ನದಲ್ಲಿಯೇ ಚಿನ್ನದ ಪದಕ ಗಳಿಸಿದ್ದಾರೆ.ಇವರ ಸಾಧನೆಗೆ ಶಿರ್ವ  ಗ್ರಾಮಸ್ಥರು  ಹಾಗೂ ಶಿಕ್ಷಣ ಸಂಸ್ಥೆ ಯ ಆಡಳಿತ ಮಂಡಳಿ  ಅಭಿನಂದನೆಯನ್ನು ಸಲ್ಲಿಸಿದ್ದಾರೆ.ಐವನ್ ಡಿಸೋಜಾ.ಶಿರ್ವ ರೊನಾಲ್ಡ್ ಡಿಸೋಜಾ ಹಾಗೂ ಪ್ರಮೀಳಾ‌ ಡಿಸೋಜಾ ದಂಪತಿಗಳ‌ ಪುತ್ರನಾಗಿದ್ದಾರೆ.

Edited By : PublicNext Desk
Kshetra Samachara

Kshetra Samachara

15/06/2022 01:36 pm

Cinque Terre

1.24 K

Cinque Terre

0

ಸಂಬಂಧಿತ ಸುದ್ದಿ