ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರದ ಪವರ್ ಲಿಫ್ಟರ್ ಸತೀಶ್ ಖಾರ್ವಿಗೆ ಮತ್ತೊಂದು ಚಿನ್ನದ ಪದಕ

ಕುಂದಾಪುರ: ಜಿಮ್ ತರಬೇತುದಾರ, ಪವರ್ ಲಿಫ್ಟಿಂಗ್ ಪಟು ಕುಂದಾಪುರದ ಸತೀಶ್ ಖಾರ್ವಿ ಮತ್ತೊಮ್ಮೆ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಮೈಸೂರಿನ ಡೈಮಂಡ್ ಜುಬ್ಲಿ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ರಾಜ್ಯಮಟ್ಟದ ಪುರುಷರ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ 66 ಕೆಜಿ ವಿಭಾಗದಲ್ಲಿ ಒಟ್ಟು 587.5 ಕೆಜಿ ಭಾರವನ್ನು ಎತ್ತಿ ಚಿನ್ನದ ಪದಕ ಹಾಗೂ ಕರ್ನಾಟಕದ ಬಲಿಷ್ಠ ಪುರುಷ ಪ್ರಶಸ್ತಿ -2022 ರ ಪ್ರಶಸ್ತಿಯನ್ನು ಪಡೆದು ಕುಂದಾಪುರಕ್ಕೆ ಕೀರ್ತಿಯನ್ನು ತಂದಿದ್ದಾರೆ.

ಇವರು 2019ರಲ್ಲಿ ಕಜಕಿಸ್ತಾನದಲ್ಲಿ ನಡೆದ ಏಷ್ಯನ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮೂರು ಚಿನ್ನ ಹಾಗೂ ಒಂದು ಬೆಳ್ಳಿಯ ಪದಕ ಗೆದ್ದಿದ್ದರು.

ಕುಂದಾಪುರದ ಹರ್ಕ್ಯುಲಸ್ ಜಿಮ್ ವ್ಯವಸ್ಥಾಪಕರಾಗಿರುವ ಸತೀಶ್ ಖಾರ್ವಿ ನೂರಾರು ಜನರಿಗೆ ತರಬೇತಿ ನೀಡುತ್ತಿದ್ದಾರೆ. ಸತೀಶ್ ಖಾರ್ವಿಯವರು 2003 ರಲ್ಲಿ ಈ ಪ್ರಶಸ್ತಿಯನ್ನು ಪಡೆದಿದ್ದು, ಮತ್ತೆ ಸುಮಾರು 19 ವರ್ಷದ ಬಳಿಕ ಈ ವರ್ಷ ಪ್ರಶಸ್ತಿ ಪಡೆದಿದ್ದಾರೆ.

Edited By :
Kshetra Samachara

Kshetra Samachara

13/06/2022 01:02 pm

Cinque Terre

1.13 K

Cinque Terre

0

ಸಂಬಂಧಿತ ಸುದ್ದಿ