ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ರಾಗಧನ ಶ್ರೀ ಪುರಂದರದಾಸ ಸಂಗೀತೋತ್ಸವ ಸಮಾರೋಪ

ಉಡುಪಿ: ಉಡುಪಿಯ ರಾಗಧನ ಸಂಸ್ಥೆಯ ಆಶ್ರಯದಲ್ಲಿ ನಡೆದ ಶ್ರೀ ಪುರಂದರದಾಸ ಮತ್ತು ಸಂಗೀತ ತ್ರಿಮೂರ್ತಿ ಉತ್ಸವದ ಸಮಾರೋಪ ನಡೆಯಿತು.

ಕಲಾ ವಿಮರ್ಶಕ ಎ.ಈಶ್ವರಯ್ಯ ಅವರ ನೆನಪಲ್ಲಿ ನೀಡುವ "ಕಲಾ ಪ್ರವೀಣ" ಪ್ರಶಸ್ತಿಯನ್ನು ಸಂಗೀತ ವಿಮರ್ಶಕಿ ಸರೋಜಾ ಆಚಾರ್ಯ ಅವರಿಗೆ ನೀಡಿ ಪುರಸ್ಕರಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿದ್ವಾಂಸ ಡಾ. ರಾಘವ ನಂಬಿಯಾರ್ ಮಾತನಾಡಿ, ಸಂಗೀತ ಮತ್ತು ಸಾಹಿತ್ಯದ ಸಾಂಗತ್ಯ ಇರದ ಮನುಷ್ಯ ಪಶು ಸಮಾನ. ಕಲೆಯ ಕ್ಲಿಷ್ಟಕರ ವಿಚಾರಗಳನ್ನು ಲೀಲಾಜಾಲವಾಗಿ ಪ್ರಕಟಿಸಬಲ್ಲವನೇ ಕಲಾಪ್ರವೀಣ ಎಂದರು.

ಪತ್ರಕರ್ತ ಎ.ಈಶ್ವರಯ್ಯ ಅವರ ಕುರಿತು ಪ್ರಕಟಗೊಂಡಿರುವ 'ಈಶ್ವರಾರ್ಪಣ' ಪುಸ್ತಕವನ್ನು ಸಂಸ್ಥೆಯ ಕೋಶಾಧಿಕಾರಿ ಸದಾಶಿವ ರಾವ್ ಪರಿಚಯಿಸಿದರು. ಡಾ.ಕಿರಣ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು‌. ಶೈಲೇಂದ್ರ ಅನಂತಪುರ, ಜ್ಯೋತಿ ಶೈಲೇಂದ್ರ ಉಪಸ್ಥಿತರಿದ್ದರು.

ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ಟಿ.ಕೆ. ಸ್ವಾಗತಿಸಿದರು. ವಾರಿಜಾಕ್ಷಿ ಆರ್. ಎಲ್. ಭಟ್ ವಂದಿಸಿದರು. ಪ್ರಭಾಕರ ಜಿ.ಪಿ. ನಿರೂಪಿಸಿದರು.

Edited By : Nagaraj Tulugeri
Kshetra Samachara

Kshetra Samachara

07/02/2021 08:48 pm

Cinque Terre

2.54 K

Cinque Terre

0

ಸಂಬಂಧಿತ ಸುದ್ದಿ