ಉಡುಪಿ: ಉಡುಪಿ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷರಾಗಿ ಕಲ್ಯಾಣಪುರ ಅಬ್ದುಲ್ ಗಫೂರ್ ಆಯ್ಕೆಯಾಗಿದ್ದಾರೆ.
ಸಂಸ್ಥೆಯ ಕಚೇರಿಯಲ್ಲಿ ಆಧ್ಯಕ್ಷ ವಿ.ಎಸ್.ಉಮರ್ ಅಧ್ಯಕ್ಷತೆಯಲ್ಲಿ ಜರುಗಿದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.
ನಿಕಟಪೂರ್ವ ಕಾರ್ಯದರ್ಶಿ ಖಲೀಲ್ ಅಹಮದ್ ವಾರ್ಷಿಕ ವರದಿ, ಖಜಾಂಚಿ ಮುನೀರ್ ಲೆಕ್ಕಪತ್ರ ಮಂಡಿಸಿದರು.
ಮುಂದಿನ ವರ್ಷಕ್ಕೆ ನೂತನ ಸಮಿತಿಯನ್ನು ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಕೆ.ಅಬ್ದುಲ್ ಗಫೂರ್ ಆದಿ ಉಡುಪಿ, ಕಾರ್ಯದರ್ಶಿಯಾಗಿ ಯು.ಇಬ್ರಾಹಿಂ, ಜತೆ ಕಾರ್ಯದರ್ಶಿಯಾಗಿ ಮುಹಮ್ಮದ್ ಫಯಾಜ್, ಖಜಾಂಚಿಯಾಗಿ ಝಕೀರ್ ಹುಸೇನ್, ಸದಸ್ಯರಾಗಿ ವಿ.ಎಸ್.ಉಮರ್, ಮುನೀರ್ ಮಹಮೂದ್, ಖಾಲಿದ್ ಅಬ್ದುಲ್ ಅಝೀಜ್, ಎಸ್.ಎ.ಶಮೀಮ್, ರಿಯಾಜ್ ಅಹ್ಮದ್, ಇಕ್ವಾನ್ ಜಿ.ರವೂಫ್ ಆಯ್ಕೆಯಾದರು.
ಇವರೊಂದಿಗೆ ಇಕ್ಬಾಲ್ ಮನ್ನಾ ಮತ್ತು ಪರ್ವೇಜ್ ಯಾಕೂಬ್ ಅವರನ್ನು ಹೆಚ್ಚುವರಿ ಸದಸ್ಯರನ್ನಾಗಿ ಸೇರಿಸಿ ಕೊಳ್ಳಲಾಯಿತು.
Kshetra Samachara
13/01/2021 06:00 pm