ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಭಿವೃದ್ಧಿಯ ಮೂಲಕ ಕಾರ್ಕಳದಲ್ಲಿ ಕಾಂಗ್ರೆಸ್ ಪಕ್ಷವನ್ನೇ ಅಳಿಸಿ ಹಾಕಿರುವ ಸುನಿಲ್ ಬಗ್ಗೆ ಮೊಸರಲ್ಲಿ ಕಲ್ಲು ಹುಡುಕುವ ವ್ಯರ್ಥ ಪ್ರಯತ್ನ : ನವೀನ್ ನಾಯಕ್ ವ್ಯಂಗ್ಯ

ಕಾರ್ಕಳ :ಕಾರ್ಕಳ ವಿಧಾನಸಭಾ ಕ್ಷೇತ್ರವನ್ನು ಸರ್ವತೋಮುಖ ಅಭಿವೃದ್ಧಿಯತ್ತ ಕೊಂಡೊಯ್ಯುವ ಪಣತೊಟ್ಟು ಅಭಿವೃದ್ಧಿಯ ಉತ್ತುಂಗಕ್ಕೆ ಏರಿಸಿ ಅಭೂತಪೂರ್ವ ಜನಮನ್ನಣೆಗೆ ಪಾತ್ರರಾಗಿರುವ ಶಾಸಕ ಸುನಿಲ್ ಕುಮಾರ್ ಕಾರ್ಕಳದಲ್ಲಿ ಕಾಂಗ್ರೆಸ್ಸಿನ ಕುರುಹು ಉಳಿಯದಂತೆ ಅಳಿಸಿ ಹಾಕಿದ್ದಾರೆ ಹೀಗಿರುವಾಗ ಕಾರ್ಕಳದಲ್ಲಿ ಈಗಾಗಲೇ ಇತಿಹಾಸದ ಪುಟ ಸೇರಿರುವ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಮೊಸರಿನಲ್ಲಿ ಕಲ್ಲು ಹುಡುಕುವ ವ್ಯರ್ಥ ಪ್ರಯತ್ನ ಮಾಡುತ್ತಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್ ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಪ್ರತಿಯೊಂದು ಯೋಜನೆಗಳಲ್ಲೂ ಹಗರಣ ನಡೆದಿದೆ. ಅನ್ನಭಾಗ್ಯ ಅಕ್ಕಿ ಕಳವು, ಅರ್ಕಾವತಿ ರೀಡೂ ಹಗರಣ, ಹಾಸಿಗೆ ತಲೆದಿಂಬು ಖರೀದಿ ಹಗರಣ, ಕಲ್ಲು ಗಣಿಕಾರಿಕೆ, ವರ್ಗಾವಣೆ ದಂಧೆ, ನಾಗಾರ್ಜುನ ಕಂಪನಿಯಿಂದ 15% ಕಮಿಷನ್ ಪಡೆದು ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಕಾಂಗ್ರೆಸ್ ಕೈ ಹಾಕಿದ ಸತ್ಯಸಂಗತಿ ಗೋವಿಂದ ರಾಜ್ ಡೈರಿಯಲ್ಲಿ ಬಯಲಾಗಿದೆ. ಕಾಂಗ್ರೆಸ್ ಪಕ್ಷ ಹಗರಣ ಮಾಡಲೆಂದೇ ಅಧಿಕಾರಕ್ಕೆ ಬಂದಿದ್ದು ಎಂಬ ರೀತಿಯಲ್ಲಿ ಸಿದ್ದರಾಮಯ್ಯ ಸರ್ಕಾರ ಆಡಳಿತ ನಡೆಸಿತ್ತು.

ಹಗರಣಗಳ ಸರಮಾಲೆಯನ್ನೇ ಕೊರಳಿಗೆ ಹಾಕಿ ಓಡಾಡಿದ ಖ್ಯಾತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ಭ್ರಷ್ಟಾಚಾರದಿಂದಲೇ ಜೈಲು ಸೇರಿ, ಬೇಲ್ ಪಡೆದ ಕಾಂಗ್ರೆಸ್ ನಾಯಕರೇ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ಅವರಿಗೆ ಬೆಂಬಲವಾಗಿ ಕೆಳಸ್ತರದ ನಾಯಕರು ಹೇಳಿಕೆ ನೀಡುತ್ತಿರುವುದಲ್ಲದೇ ಉತ್ತಮ ಆಡಳಿತವನ್ನು ನೀಡುತ್ತಿರುವ ಬಿಜೆಪಿ ಸರ್ಕಾರ ಹಾಗೂ ಇಂಧನ ಸಚಿವ ಸುನಿಲ್‌ಕುಮಾರ್‌ರವರ ನೈತಿಕತೆಯನ್ನು ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದ ಎಂದಿದ್ದಾರೆ.

ಇAಧನ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದು, ಸದಾ ನಷ್ಟದ ಸುಳಿಯಲ್ಲಿದ್ದ ಇಲಾಖೆಯನ್ನು ಲಾಭದ ಹಾದಿಯಲ್ಲಿ ಮುನ್ನಡೆಸತ್ತಿರುವುದು ಇಂಧನ ಸಚಿವರ ಅದ್ಭುತ ಕಾರ್ಯ ವೈಖರಿಗೆ ಸಾಕ್ಷಿ. ಮಳೆಗಾಲಕ್ಕೆ ಮುನ್ನ ಟ್ರಾನ್ಸ್ಫಾರ್ಮರ್ ನಿರ್ವಹಣಾ ಅಭಿಯಾನ ನಡೆಸಿ ಅಭಿವೃದ್ಧಿಗೆ ಮುನ್ನುಡಿ ಬರೆದ ಮೊದಲ ಇಂಧನ ಸಚಿವ ಸುನಿಲ್ ಕುಮಾರ್ ಸಬ್‌ಡಿವಿಷನ್ ಮಟ್ಟದಲ್ಲಿ ಟ್ರಾನ್ಸ್ಫಾರ್ಮರ್ಸ್ ಬ್ಯಾಂಕ್ ಮಾಡುವ ಮೂಲಕ 24 ಗಂಟೆಗಳ ಒಳಗೆ ಟಿಸಿ ಬದಲಾಯಿಸುವವಷ್ಟು ಮಟ್ಟಕ್ಕೆ ಇಂಧನ ಇಲಾಖೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಿದ್ದು ಅಲ್ಲದೆ ಇವಿದ್ಯುತ್ ಸಂಪರ್ಕಕ್ಕಾಗಿ ಕಚೇರಿ ಅಲೆದಾಡುತ್ತಿದ್ದ ಬಡವರ ಪಾಲಿಗೆ ಬೆಳಕು ಯೋಜನೆಯನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದು ಬಡವರ ಪಾಲಿನ ಆಶಾಕಿರಣವಾಗಿದ್ದಾರೆ.

ಅರ್ಹತೆಯ ಮೇರೆಗೆ ಇಂಧನ ಇಲಾಖೆಯಲ್ಲಿ ಉದ್ಯೋಗ ನೀಡುವ ಮೂಲಕ ಸಾವಿರಾರು ಯುವಕರ ಬಾಳಿಗೆ ಬೇಳಕಾಗಿದ್ದು ಇಂಧನ ಸಚಿವರಾದ ಸುನಿಲ್ ಕುಮಾರ್.ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾಗಿ ಲಕ್ಷಕಂಠ ಗಾಯನದ ಮೂಲಕ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ದಾಖಲೆಬರೆದಿದ್ದನ್ನು ಜನತೆ ಮರೆತಿಲ್ಲ. ಮೊನ್ನೆಯಷ್ಟೆ ನಾಡ ಗೀತೆಯ ಬಗ್ಗೆ ಇದ್ದ 18 ವರ್ಷಗಳ ಗೊಂದಲವನ್ನು ನಿವರಿಸಿದ ಹೆಗ್ಗಳಿಕೆ ಮಾನ್ಯ ಸುನಿಲ್ ಕುಮಾರ್‌ರಿಗೆ ಸಲ್ಲುತ್ತದೆ.

ಅಭಿವೃದ್ದಿ ಚಟುವಟಿಕೆಗಳನ್ನು ಸಹಿಸದೇ ಸದಾ ಇಲ್ಲಸಲ್ಲದ ಟೀಕೆಗಳನ್ನು ಮಾಡುತ್ತಾ ತನ್ನ ವರ್ಚಸ್ಸನ್ನು ಕಳೆದುಕೊಂಡು ಕಾಂಗ್ರೆಸ್ ತನ್ನ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿದೆ ಎಂದು ನವೀನ್ ನಾಯಕ್ ತಿವಿದಿದ್ದಾರೆ.

Edited By : PublicNext Desk
Kshetra Samachara

Kshetra Samachara

26/09/2022 09:35 pm

Cinque Terre

1.73 K

Cinque Terre

0

ಸಂಬಂಧಿತ ಸುದ್ದಿ