ಉಡುಪಿ: ಈ ಬಾರಿ ಉಡುಪಿ ಜಿಲ್ಲೆಯ ಕಾಪು ಪುರಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಆಮ್ ಆದ್ಮಿಪಕ್ಷ ಸ್ಪರ್ಧಿಸುವುದರೊಂದಿಗೆ ಜಿಲ್ಲೆಯಲ್ಲಿ ಪಕ್ಷ ತನ್ನ ಬಲವರ್ದನೆ ಮಾಡಲಿದೆ ಎಂದು ಪಕ್ಷದ ಮುಖಂಡರು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಇಂದು ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಪಕ್ಷದ ಮುಖಂಡರು, ನಮ್ಮ ಧ್ಯೇಯ ಮತ್ತು ಉದ್ದೇಶಗಳು ತುಂಬಾ ಸ್ಪಷ್ಟವಾಗಿವೆ.
ಆಮ್ ಆದ್ಮಿ ಪಾರ್ಟಿ ಅನ್ನೋದು ಒಂದು ವ್ಯವಸ್ಥಿತ ಹಾಗೂ ಶಿಸ್ತುಬದ್ಧ ಪಕ್ಷವಾಗಿದ್ದು, ಪಕ್ಷದ ಬಗ್ಗೆ ಆಸಕ್ತಿ ಹಾಗೂ ಅಭಿಮಾನ ಇರುವ ಜನಸಾಮಾನ್ಯರು ಪಕ್ಷದ ದೂರವಾಣಿ ಸಂಖ್ಯೆ 7412042042ಗೆ ಮಿಸ್ ಕಾಲ್ ಮಾಡುವ ಮೂಲಕ ಸದಸ್ಯತ್ವ ಪಡೆಯಲು ಅವಕಾಶವಿದೆ. ಈ ಬಾರಿ ಆಮ್ ಆದ್ಮ ಪಕ್ಷವು ಉಡುಪಿ ಜಿಲ್ಲೆಯಲ್ಲಿ ನಡೆಯುವ ಚುನಾವಣೆಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಜಿಲ್ಲಾ ಮಟ್ಟದಲ್ಲಿ ಮತ್ತು ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲಿದೆ ಎಂದು ಮುಖಂಡರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸ್ಟೀಫನ್ ರಿಚರ್ಡ್ ಲೋಬೊ ,ಆಶ್ಲೇ ಕರ್ನಲಿಯೋ ,ಮೋಹನ್ ಬಾಬು, ಕ್ರಿಸ್ಟಿನಾ ಡಿಸೋಜ ,ಮೊಹಮ್ಮದ್ ಪೆರ್ಡೂರು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
02/12/2021 01:39 pm