ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ:ನಾಳೆಯಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ

ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ನಿಂದ ನಾಳೆ ಸದಸ್ಯತ್ವ ನೋಂದಣಿಗೆ ಚಾಲನೆ ಸಿಗಲಿದ್ದು ಜಿಲ್ಲೆಯಲ್ಲಿ ಸುಮಾರು ಅರವತ್ತು ಸಾವಿರದಷ್ಟು ಹೊಸ ಸದಸ್ಯರ ಸೇರ್ಪಡೆ ಗುರಿ ಹೊಂದಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.

ಉಡುಪಿಯ ಡಿಸಿಸಿಯಲ್ಲಿ ಸುದ್ದಿಗೋಷ್ಠಿ ನಡೆದಿದ ಅವರು ,ರಾಜ್ಯದಲ್ಲಿ ನವೆಂಬರ್ 14 ಕ್ಕೆ ಸದಸ್ಯತ್ವ ನೋಂದಣಿ ಅಭಿಯಾನ ಪ್ರಾರಂಭಗೊಂಡಿದೆ.ನಾಳೆ ಇಂದಿರಾಗಾಂಧಿ ಜನ್ಮದಿನ ಪ್ರಯುಕ್ತ ಜಿಲ್ಲೆಯಲ್ಲಿ ನೋಂದಣಿ ಕಾರ್ಯ ಮಾಡಲಿದ್ದೇವೆ.ಪ್ರತೀ ಬೂತ್ ಮತ್ತು ಗ್ರಾಮದಲ್ಲಿ ಸದಸ್ಯರನ್ನು ನೋಂದಾಯಿಸುವುದರಿಂದ ಪಕ್ಷದ ಬಲವರ್ದನೆಗೆ ಸಹಕಾರಿಯಾಗಲಿದೆ.ಹನ್ನೊಂದು ವರ್ಷಗಳ ಬಳಿಕ ಸದಸ್ಯತ್ವ ನೋಂದಣಿ ಅಭಿಯಾನ‌ ಕೈಗೆತ್ತಿಕೊಳ್ಳಲಾಗಿದ್ದು ಗರಿಷ್ಠ ಸಂಖ್ಯೆಯಲ್ಲಿ ಜನರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ಗುರಿ ಇದೆ ಎಂದು ಹೇಳಿದರು.

Edited By : PublicNext Desk
Kshetra Samachara

Kshetra Samachara

18/11/2021 05:45 pm

Cinque Terre

2.01 K

Cinque Terre

0

ಸಂಬಂಧಿತ ಸುದ್ದಿ