ಉಡುಪಿ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಜಿಲ್ಲಾ ಮಟ್ಟದಲ್ಲಿ ಜನರಿಗೆ ಸಹಾಯ ಮಾಡಲು ಜಿಲ್ಲಾವಾರು ಕಛೇರಿಗಳನ್ನು ಮತ್ತು ಸಹಾಯವಾಣಿಗಳನ್ನು ತೆರೆಯುವ ಕಾರ್ಯಕ್ಕೆ ಮುಂದಾಗಿದೆ. ಇವತ್ತು ಕೆ.ಆರ್.ಎಸ್ ಪಕ್ಷದ ಎರಡನೇ ಸಂಸ್ಥಾಪನ ದಿನದಂದು ಉಡುಪಿ ಜಿಲ್ಲೆಯಲ್ಲಿ ಕೆ.ಆರ್.ಎಸ್. ಪಕ್ಷದ ಉಡುಪಿ ಜಿಲ್ಲಾ ಕಛೇರಿ ಉದ್ಘಾಟನೆ ಮತ್ತು ಸಹಾಯವಾಣಿ ಸಂಖ್ಯೆ 7337837129 ಯ ಉದ್ಘಾಟನೆ ಮಾಡಲಾಯಿತು.
ಸಹಾಯವಾಣಿಯ ಮುಖ್ಯ ಉದ್ದೇಶ ಸರ್ಕಾರಿ ಕಛೇರಿಗಳಲ್ಲಿ ಯಾರದರೂ ಲಂಚ ಕೇಳಿದಲ್ಲಿ, ವಿನಾಕಾರಣ ಕೆಲಸಗಳನ್ನು ವಿಳಂಬ ಮಾಡಿದಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ರೇಷನ್ ಕಡಿಮೆ ನೀಡಿದಲ್ಲಿ ಅಥವಾ ದುಡ್ಡು ಕೇಳಿದಲ್ಲಿ, ಪೊಲೀಸರು ಅಮಾಯಕರ ಮೇಲೆ ದೌರ್ಜನ್ಯ ಅಥವಾ ಸುಳ್ಳು ಕೇಸು ದಾಖಲಿಸಿದಲ್ಲಿ ಸಾರ್ವಜನಿಕರು ನಮ್ಮ ಸಹಾಯವಾಣಿ ಸಂಖ್ಯೆ 7337837129 ಗೆ ಕರೆ ಮಾಡಬಹುದು. ನಾವು ಅವರ ಸಮಸ್ಯೆಯನ್ನು ಬಗೆಹರಿಸುತ್ತೇವೆ. ಮತ್ತು ಆ ಲಂಚ ಕೇಳಿದ ಅಥವಾ ಅಕ್ರಮವೆಸಗಿದ ಅಧಿಕಾರಿ ಮೇಲೆ ಕಾನೂನು ರೀತಿ ಕ್ರಮ ಜರುಗುವಂತೆ ಮಾಡುತ್ತೇವೆ ಎಂದು ಕೆ.ಆರ್ ಎಸ್ ಪಕ್ಷದ ಮುಖಂಡರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅಶೋಕ್ ರಾಜ್ ,ಕೆ.ಆರ್.ಎಸ್ ಜಿಲ್ಲಾಧ್ಯಕ್ಷರು ,ಇಕ್ಬಾಲ್ ಕುಂಜಿಬೆಟ್ಟು,ಅಧ್ಯಕ್ಷರು ಅಲ್ಪ ಸಂಖ್ಯಾತ ಘಟಕ,ಹನೀಫ್ ಕಾಪು, ಜಿಲ್ಲಾ ಕಾರ್ಯದರ್ಶಿ,ಜಾಹಿದ ಬಾನು, ಉಪಾಧ್ಯಕ್ಷರು ಅಲ್ಪ ಸಂಖ್ಯಾತ ಘಟಕ,ಭರತ್ ಪೈ , ನಿತಿನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
10/08/2021 12:54 pm