ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರೊನಾ ಲಸಿಕೆ ವಿತರಣೆಯಲ್ಲಿ ಸರಕಾರ ವಿಫಲ ; ಕುಂದಾಪುರ ಬ್ಲಾಕ್ ಕಾಂಗ್ರೆಸ್

ಕುಂದಾಪುರ: ಕೊರೊನಾ ಲಸಿಕೆ ನೀಡುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದ್ದು ಕೂಡಲೇ ಸರಕಾರ ಈ ಬಗ್ಗೆ ಗಮನ ಹರಿಸಬೆಕೆಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿ ಆಗ್ರಹಿಸಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ಸರಾಗವಾಗಿ ಸಿಗುವ ಲಸಿಕೆ ಸರಕಾರಿ ಆಸ್ಪತ್ರೆಯಲ್ಲಿ ಯಾಕೆ ಸಿಗುತ್ತಿಲ್ಲ ಎನ್ನುವುದು ಸಂಶಯಕ್ಕೆ ಕಾರಣವಾಗಿದೆ. ಕಳೆದ 5 ದಿನಗಳಿಂದ ಸರಕಾರಿ ಆಸ್ಪತ್ರೆಗೆ ಲಸಿಕೆ ಪೊರೈಕೆಯಾಗಿಲ್ಲ.ಒಂದೆಡೆ ಮೊದಲ ಡೋಸ್ ಲಸಿಕೆಗೆ ಹದಿನೆಂಟು ವರ್ಷ ಮೇಲ್ಪಟ್ಟವರು ಪರದಾಡುತ್ತಿದ್ದರೆ ಇನ್ನೊಂದು ಕಡೆ ನಿಗದಿತ ಸಮಯಕ್ಕೆ 2 ನೇ ಡೋಸ್ ಲಸಿಕೆ ಪಡೆಯಲಾಗದೆ ಪರದಾಡುತ್ತಿದ್ದಾರೆ.

ಸರಕಾರ ಕೂಡಲೇ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮವಹಿಸಿ ಜನರಿಗೆ ನಿಗದಿತ ಸಮಯಕ್ಕೆ ಲಸಿಕೆ ನೀಡಬೇಕೆಂದು ಆಗ್ರಹಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

07/08/2021 02:05 pm

Cinque Terre

2.67 K

Cinque Terre

0

ಸಂಬಂಧಿತ ಸುದ್ದಿ