ಉಡುಪಿ: ಭಾರತೀಯ ಜನತಾ ಪಾರ್ಟಿ ಉಡುಪಿ ನಗರದ ಆಶ್ರಯದಲ್ಲಿ ಉಡುಪಿ ನಗರ ಮಂಡಲ ವ್ಯಾಪ್ತಿಯ 132 ಮತಗಟ್ಟೆಗಳಲ್ಲಿ "ಬೂತ್ ಸಶಕ್ತೀಕರಣ ಅಭಿಯಾನ" ನಡೆಯುತ್ತಿದೆ.ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕುಂಜಿಬೆಟ್ಟು ವಾರ್ಡಿನ ಬೂತ್ ಸಶಕ್ತೀಕರಣ ಸಭೆ ನಡೆಯಿತು.ಶಾಸಕ ಕೆ ರಘುಪತಿ ಸಭೆಯ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷರಾದ ಮಹೇಶ್ ಠಾಕೂರ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಕಾರ್ಯಾಲಯ್ ಪ್ರಮುಖರಾದ ಸಂಜೀವ ನಾಯಕ್, ಸ್ಥಳೀಯ ನಗರಸಭಾ ಸದಸ್ಯರಾದ ಗಿರೀಶ್ ಅಂಚನ್, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಮಣಿಪಾಲ್, ದಿನೇಶ್ ಅಮೀನ್, ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕ ಚಂದ್ರಶೇಖರ್ ಪ್ರಭು, ಬೂತ್ ಅಧ್ಯಕ್ಷರಾದ ಶರತ್ ಸಾಲಿಯಾನ್, ಸುಪ್ರೀತ್ ಭಂಡಾರಿ, ಹರೀಶ್ ಬೈಲಕೆರೆ, ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
31/07/2021 11:36 am