ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇಸರಿ ಧ್ವಜ ಕಸಿದು ನೀಲಿ ಬಾವುಟ ಕೊಡಿ: ದಲಿತ ಮುಖಂಡ ಶ್ಯಾಮರಾಜ್ ಬಿರ್ತಿ

ಉಡುಪಿ: ನಮ್ಮಮಕ್ಕಳು ಸುಳ್ಳಿನ ಭ್ರಮೆಯ ಬಲೆಗೆ ಬಿದ್ದು ಕೇಸರಿ ಧ್ವಜ ಹಿಡಿಯುತ್ತಿದ್ದಾರೆ. ಅಕ್ಕಂದಿರಾದ ತಾವು, ನಿಮ್ಮ ಮಕ್ಕಳ ಕೈಯಲ್ಲಿರುವ ಕೇಸರಿ ಧ್ವಜ ಕಸಿದು ನಮ್ಮ ಆಸ್ಮಿತೆಯ ಸಂಕೇತವಾದ ನೀಲಿ ಬಾವುಟವನ್ನು ಅವರ ಕೈಗೆ ಕೊಡಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ದಲಿತ ಮಹಿಳೆಯರಿಗೆ ಕರೆಕೊಟ್ಟರು.

ಅವರು ಮೂಡುಬೆಳ್ಳೆಯಲ್ಲಿ ನಡೆದ ದಲಿತ ಮಹಿಳಾ ಒಕ್ಕೂಟದ ಗ್ರಾಮ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ನಮ್ಮ ಮಕ್ಕಳಿಗೆ ಇಂದು ಧರ್ಮದ ಒಳಗಿರುವ ಜಾತೀಯತೆಯ ನಂಜಿನ ಅರಿವಿಲ್ಲ, ನಮ್ಮ ಈ ಸ್ಥಿತಿಗೆ ಜಾತೀಯತೆಯೇ ಕಾರಣ ಎಂಬ ವಾಸ್ತವ ಸತ್ಯವನ್ನು ನಾವು ಅವರಿಗೆ ತಿಳಿಸಬೇಕಾಗಿದೆ. ಹಿಂದೂ ಧರ್ಮದಲ್ಲಿ ನಮಗೆ ಸ್ಥಾನವೇ ಇಲ್ಲ ಎಂಬ ಕಟು ಸತ್ಯವನ್ನು ತಾಯಂದಿರು ಮಕ್ಕಳಿಗೆ ತಿಳಿಹೇಳಬೇಕು ಎಂದರು.

ಈ ದೇಶದಲ್ಲಿ ಪ್ರತೀ ನಿಮಿಷಕ್ಕೆ ಒಂದರಂತೆ ಮೇಲ್ವರ್ಗದವರಿಂದ ದಲಿತರ ಮೇಲೆ ದೌರ್ಜನ್ಯ ನಡೆದರೂ ನಮ್ಮನ್ನು ಆಳುವ ಸರ್ಕಾರದವರು ಧರ್ಮ, ಪಾಕಿಸ್ತಾನ, ಮೂರ್ತಿ, ದೇವಸ್ಥಾನ, ದೇಶಭಕ್ತಿ, ಚೀತಾ ಹೀಗೆ ನಾನಾ ರೀತಿಯ ಸುಳ್ಳನ್ನು ನಮ್ಮ ತಲೆಗೆ ತುಂಬಿ ನಮ್ಮ ಅಭಿವೃದ್ಧಿಯನ್ನೇ ಮರೆಯುವಂತೆ ಮಾಡಿದ್ದಾರೆ. ಎಲ್ಲಾ ಸರ್ಕಾರೀ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡೀ ಮೀಸಲಾತಿಯಿಂದ ಪರಿಶಿಷ್ಟರನ್ನು ವಂಚಿಸಲಾಗುತ್ತಿದೆ ಎಂದರು.

ಮೂಡುಬೆಳ್ಳೆ ಮಹಿಳಾ ಒಕ್ಕೂಟ ಉದ್ಘಾಟಿಸಿದ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್‌ ಮಾತನಾಡಿ, ನಾವೆಲ್ಲಾ ಒಗ್ಗಟ್ಟಾಗಿ ಕೋಮುವಾದಿಗಳನ್ನು, ಜಾತಿವಾದಿಗಳನ್ನು ಅಧಿಕಾರದಿಂದ ಕೆಳಗಿಳಿಸುವ ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ದ.ಸಂ.ಸ.ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ಉಳ್ಳೂರು, ಭಾಸ್ಕರ್ ಮಾಸ್ತರ್, ಅಣ್ಣಪ್ಪ ನಕ್ರೆ, ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ರಾಜೇಂದ್ರ ಬೆಳ್ಳೆ, ಉಡುಪಿ ತಾಲೂಕು ಸಂಚಾಲಕ ಶಂಕರ್ ದಾಸ್ ಚೆಂಡಳ, ಮೂಡುಬೆಳ್ಳೆ ಸಂಚಾಲಕ ರಾಘವ ಬೆಳ್ಳೆ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

27/09/2022 09:47 pm

Cinque Terre

1.88 K

Cinque Terre

0

ಸಂಬಂಧಿತ ಸುದ್ದಿ