ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀಜಾಡಿ: ಬಿಜೆಪಿ ಬೆಂಬಲಿತ ಅಭ್ಯರ್ಥಿ ಮನೆಗೆ ನುಗ್ಗಿ ಹಲ್ಲೆ

ಬೀಜಾಡಿ: ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮ ಪಂಚಾಯತಿ ಮೂರನೇ ವಾರ್ಡ್‌ನ ಮಾಜಿ ಸದಸ್ಯ, ಪ್ರಸ್ತುತ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರಕಾಶ ಪೂಜಾರಿ ಅವರ ಮನೆಗೆ ನುಗ್ಗಿ ದಂಪತಿ ಮೇಲೆ ಹಲ್ಲೆ ನಡೆಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ರಾಜಕೀಯ ದುರುದ್ದೇಶದಿಂದ ಜೋಗ ಪುತ್ರನ್ ಮತ್ತು ಸಹೋದರ ಗಣೇಶ್‌ ಎಂಬವರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪ್ರಕಾಶ್‌ ಪೂಜಾರಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ರಾತ್ರಿ ಅವರ ಮನೆಗೆ ಬಂದಿದ್ದ ಆರೋಪಿಗಳು ಬಾಗಿಲನ್ನು ತಟ್ಟಿ ಪ್ರಕಾಶ್‌ ಪೂಜಾರಿ, ಅವರ ಪತ್ನಿ ಜ್ಯೋತಿ ಪೂಜಾರಿ ಹಾಗೂ ಕುಟುಂಬಸ್ಥರನ್ನು ಹೊರಗೆ ಎಳೆದು ತಂದು ಹಿಗ್ಗಾಮುಗ್ಗ ಥಳಿಸಿದ್ದಾರೆ.

ಗಾಯಾಳುಗಳನ್ನು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

26/12/2020 08:49 am

Cinque Terre

9.57 K

Cinque Terre

2

ಸಂಬಂಧಿತ ಸುದ್ದಿ