ವರದಿ: ಶಫೀ ಉಚ್ಚಿಲ
ಕಾಪು: ತನ್ನ ಜೀವನವನ್ನೇ ಹಿಂದುಳಿದ ಸಮುದಾಯದ ಪ್ರಗತಿಗಾಗಿ ಮುಡಿಪಾಗಿಟ್ಟ ಶ್ರೀ ನಾರಾಯಣ ಗುರುವರ್ಯರ ಜಯಂತ್ಯುತ್ಸವವನ್ನು ಕೇವಲ ಬಿಲ್ಲವ ಸಮಾಜಕ್ಕೆ ಮಾತ್ರ ಸೀಮಿತವಾಗಿರದೆ ಸಾರ್ವತ್ರಿಕವಾಗಿ ಆಚರಿಸುವಂತಾಗಬೇಕಿದೆ ಎಂದು ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕೇಂದ್ರ ಸಮಿತಿಯ ನಿಯೋಜಿತ ಅಧ್ಯಕ್ಷ ಡಾ.ರಾಜಾರಾಮ್ ಉಪ್ಪಿನಂಗಡಿ ಹೇಳಿದರು.
ಕಾಪು ಬಿಲ್ಲವರ ಸಹಾಯಕ ಸಂಘದ ಸಭಾಭವನದಲ್ಲಿ ನ.1ರಂದು ಆಯೋಜಿಸಲಾಗಿದ್ದ ಯುವವಾಹಿನಿ ಕಾಪು ಘಟಕದ 2020-21ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭದಲ್ಲಿ
ಮಾತನಾಡಿದರು.
ಈ ಸಂದರ್ಭ ಯುವವಾಹಿನಿ ಕಾಪು ಘಟಕದ 2020-21 ನೇ ಪ್ರಥಮ ಮಹಿಳಾ ಅಧ್ಯಕ್ಷರಾಗಿ ನಿಯೋಜನೆಗೊಂಡ ಸೌಮ್ಯ ರಾಕೇಶ್ ಅವರಿಗೆ ನಿರ್ಗಮನ ಅಧ್ಯಕ್ಷ ನಾಗೇಶ್ ಸುವರ್ಣ ಅವರು ಅಧಿಕಾರ ಹಸ್ತಾಂತರಿಸಿದರು.
ಕಾಪು ಬಿಲ್ಲವರ ಸಹಾಯಕ ಸಂಘದ ಗೌರವಾಧ್ಯಕ್ಷ ಪ್ರಭಾಕರ್ ಪೂಜಾರಿ ಕಾಪು ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು.
ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಲಕ್ಷ್ಮಣ್ ಸಾಲ್ಯಾನ್, ಉಪಾಧ್ಯಕ್ಷ ಉದಯ ಅಮೀನ್ ಮುಲ್ಕಿ, ಸಂಘಟನಾ ಕಾರ್ಯದರ್ಶಿ ರಮೇಶ್ ಕೋಟ್ಯಾನ್, ಯುವವಾಹಿನಿ ಕಾಪು ಘಟಕದ ಮಾಜಿ ಅಧ್ಯಕ್ಷ ದೀಪಕ್ ಕುಮಾರ್ ಎರ್ಮಾಳ್ ಮುಖ್ಯ ಅತಿಥಿಗಳಾಗಿದ್ದರು.
ಕಾಪು ಪುರಸಭೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅನಿಲ್ ಕುಮಾರ್, ಯುವವಾಹಿನಿ ಕೇಂದ್ರ ಸಮಿತಿ ನಿಯೋಜಿತ ಅಧ್ಯಕ್ಷ ಡಾ. ರಾಜಾರಾಮ್, ಯುವವಾಹಿನಿ ಕಾಪು ಘಟಕದ ನಿರ್ಗಮನ ಅಧ್ಯಕ್ಷ ನಾಗೇಶ್ ಸುವರ್ಣ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ ಅಧ್ಯಕ್ಷ ನಾಗೇಶ್ ಸುವರ್ಣ ಪ್ರಸ್ತಾವನೆಗೈದು ಸ್ವಾಗತಿಸಿದರು. ಕಾರ್ಯದರ್ಶಿ ಸುಧಾಕರ್ ಸಾಲ್ಯಾನ್ ವರದಿ ವಾಚಿಸಿ, ವಂದಿಸಿದರು.
Kshetra Samachara
02/11/2020 11:35 am