ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದು ಕಾರ್ಕಳ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷತೆಗೆ ಚುನಾವಣೆ

ಕಾರ್ಕಳ: ಎರಡು ವರ್ಷಗಳವರೆಗೆ ಗ್ರಹಣ ಹಿಡಿದಿದ್ದ ಕಾರ್ಕಳ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಕೊನೆಗೂ ದಿನಾಂಕ ಘೋಷಣೆಯಾಗಿ ಇಂದು ಸಂಜೆ 3 ಗಂಟೆಗೆ ಚುನಾವಣೆ ನಡೆಯಲಿದೆ.

ಕಳೆದ ಬಾರಿಯಂತೆ ಈ ಸಲವೂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಮಹಿಳೆಯರ ಪಾಲಾಗಿರುವುದು ವಿಶೇಷ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆಗೆ ಒಲಿದಿದೆ.

ಪುರಸಭೆಯ ಒಟ್ಟು 23 ಸ್ಥಾನಗಳ ಪೈಕಿ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 11 ಸ್ಥಾನ ಪಡೆದರೆ ಲಕ್ಷ್ಮೀ ನಾರಾಯಣ ಮಲ್ಯ ಪಕ್ಷೇತರ ಸದಸ್ಯ.

ಮತ ಲೆಕ್ಕಾಚಾರದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಬಿಜೆಪಿ ಪಾಲಾಗುವುದು ಬಹುತೇಕ ಖಚಿತವಾಗಿದ್ದರೂ, ಇತ್ತ ಕಾಂಗ್ರೆಸ್ ಕೂಡ ಬಿಜೆಪಿಯಲ್ಲಿನ ಬೆಳವಣಿಗೆ ಗಮನಿಸಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ಅಧಿಕಾರಕ್ಕೆ ಏರಲು ತಂತ್ರಗಾರಿಕೆ ಹೆಣೆದಿದೆ.

ಶಾಸಕ, ಸಂಸದರಿಗೆ ಮತ ಚಲಾಯಿಸುವ ಅವಕಾಶವಿದೆ. ಬೆಳಗ್ಗೆ 11ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.

ಮಹಿಳಾ ಸಾರಥಿ ಯಾರು?:

ಮೀಸಲಾತಿ ಘೋಷಣೆ ಬೆನ್ನಲ್ಲೇ ಅಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಸದ್ದಿಲ್ಲದೆ ಪೈಪೋಟಿ ನಡೆದಿದೆ. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಸುಮಾ ಕೇಶವ್, ಶೋಭಾ ದೇವಾಡಿಗ, ಮಮತಾ ಪೂಜಾರಿ ಹೆಸರು ಪ್ರಮುಖವಾಗಿ ಕೇಳಿಬರುತ್ತಿದ್ದು, ಶೋಭಾ ದೇವಾಡಿಗ ಈ ಹಿಂದೆ ಪುರಸಭೆ ಅಧ್ಯಕ್ಷರಾಗಿದ್ದವರು. ಆದರೂ ಬಿಜೆಪಿಯ ಉನ್ನತ ಮೂಲಗಳ ಪ್ರಕಾರ ಸುಮಾ ಕೇಶವ್ ಅವರ ಹೆಸರೇ ಬಹುತೇಕ ಅಂತಿಮಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಪಕ್ಷೇತರ ಸದಸ್ಯ ಬಿಜೆಪಿ ತೆಕ್ಕೆಗೆ ?: ಪುರಸಭೆಯ 22 ಸ್ಥಾನಗಳ ಪೈಕಿ ತಲಾ 11 ಸ್ಥಾನ ಕಾಂಗ್ರೆಸ್ ಹಾಗೂ ಬಿಜೆಪಿ ಹಂಚಿ ಕೊಂಡರೆ ಒಂದು ಸ್ಥಾನ ಪಕ್ಷೇತರ ಪಾಲಾಗಿದೆ.

ಈ ಚುನಾವಣೆಯಲ್ಲಿ ಪಕ್ಷೇತರ ಸದಸ್ಯನ ಮತ ಅಷ್ಟೇನೂ ಪ್ರಮುಖವಲ್ಲದಿದ್ದರೂ, ಬಿಜೆಪಿಯ ಮುಂದಿನ ಸುಲಲಿತ ಆಡಳಿತಕ್ಕೆ ಸರಳ ಬಹುಮತದ ಅವಶ್ಯಕತೆಯಿರುವ ಹಿನ್ನೆಲೆಯಲ್ಲಿ ಈಗಾಗಲೇ ಪಕ್ಷೇತರ ಸದಸ್ಯ ಲಕ್ಷ್ಮಿ ನಾರಾಯಣ ಮಲ್ಯ ರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ ನಡೆದಿದೆ ಎನ್ನಲಾಗಿದ್ದು, ಇಂದು ಅಭ್ಯರ್ಥಿ ಘೋಷಣೆ ಸಂದರ್ಭದಲ್ಲೇ ಪಕ್ಷೇತರ ಅಭ್ಯರ್ಥಿ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ಮಾತೂ ಕೇಳಿಬಂದಿದೆ.

Edited By : Nirmala Aralikatti
Kshetra Samachara

Kshetra Samachara

27/10/2020 10:41 am

Cinque Terre

11.15 K

Cinque Terre

0

ಸಂಬಂಧಿತ ಸುದ್ದಿ