ಮಾಳ: ಮಹಿಳೆ ಸ್ವಾವಲಂಬಿಯಾಗಿ ಬದುಕಬೇಕೆಂಬ ಉದ್ದೇಶದಿಂದ ಯೋಗವನ್ನು ಕರಗತ ಮಾಡಿಕೊಂಡು ಇತರರಿಗೂ ಮಾರ್ಗದರ್ಶಕರಾಗಬೇಕೆಂಬ ಉದ್ದೇಶದಿಂದ ಹಸಿರು ತಪ್ಪಲಿನ ಮಾಳದಲ್ಲಿ ಯೋಗ ತರಗತಿಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಪ್ರಮೀಳಾ ಡಿ ಶೆಟ್ಟಿ ಅವರು ಅಲಂಕರಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ರಮಿತಾ ಶೈಲೇಂದ್ರ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಮಹಿಳೆ ನಾಲ್ಕು ಗೋಡೆಯೊಳಗೆ ಬಂಧಿಯಾಗದೆ ತನಗೆ ತಿಳಿದಿರುವ ವಿದ್ಯೆಯನ್ನು ನಾಲ್ಕು ಜನರಿಗೆ ತಿಳಿಸುವ ಮಾತೆಯಾಗಬೇಕು, ನಿರಂತರ ಯೋಗದಿಂದ ಆರೋಗ್ಯವಂತರಾಗಿ ಇರಬಹುದು ಎಂದು ಶಿಬಿರಾರ್ಥಿಗಳಿಗೆ ರಮಿತಾ ಶುಭಹಾರೈಸಿದರು.
ಇನ್ಫೋಸಿಸ್ ನಲ್ಲಿ ಕಾರ್ಯವನ್ನು ನಿರ್ವಹಿಸಿಕೊಂಡು ಹಲವಾರು ಯೋಗಾರ್ಥಿಗಳಿಗೆ ಯೋಗ ಕಲಿಸುವ ಕೃಷ್ಣ ದಾಸ್ ಅವರು ಯೋಗವನ್ನು ಹೇಳಿ ಕೊಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ನಲ್ಲೂರು ಪಂಚಾಯತ್ ಮಾಜಿ ಅಧ್ಯಕ್ಷೆ ಗಾಯತ್ರಿ ಪ್ರಭು, ಯೋಗ ಶಿಕ್ಷಕಿ ಜಯಂತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ವಾಗತ ಶೇಖರ್ ಶೆಟ್ಟಿ, ನಿರೂಪಣೆ ಅವಿನಾಶ್ ಕುಲಾಲ್ ಅವರು ನೆರವೇರಿಸಿದರು.
Kshetra Samachara
08/09/2021 08:12 pm