ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ ಪೊಲೀಸ್ ವಸತಿ ಗೃಹದಲ್ಲಿ ಬೃಹತ್ ಹೆಬ್ಬಾವು ಸೆರೆ

ಉಡುಪಿ: ಉಡುಪಿಯ ಪೊಲೀಸ್ ವಸತಿ ಗೃಹದಲ್ಲಿ ಬೃಹತ್ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡಿದ್ದು, ಕುಕ್ಕಿಕಟ್ಟೆಯ ಪೌಲ್ ಸಾಲಿನ್ಸ್ ಎಂಬವರು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಕಳೆದ ಮೂರು ನಾಲ್ಕು ದಿನಗಳಿಂದ ಉಡುಪಿ ಮಹಿಳಾ ಠಾಣೆ, ನಗರ ಠಾಣೆ ಹಾಗೂ ವಸತಿ ಗೃಹ ಪರಿಸರದಲ್ಲಿ ಹೆಬ್ಬಾವು ಸಂಚರಿಸುತ್ತಿದ್ದರೂ ಅದನ್ನು ಹಿಡಿಯಲು ಯತ್ನಿಸುವಾಗ ಸಣ್ಣಪುಟ್ಟ ಪೊದೆಯಲ್ಲಿ ಅವಿತುಕೊಳ್ಳುತ್ತಿತ್ತು. ಭಾನುವಾರ ರಾತ್ರಿ ಪೊಲೀಸ್ ವಸತಿ ಗೃಹದ ಪಕ್ಕದಲ್ಲಿ ಪೊದೆಯಲ್ಲಿ ಕಾಣಿಸಿಕೊಂಡ ಹೆಬ್ಬಾವನ್ನು ಕುಕ್ಕಿಕಟ್ಟೆಯ ಪೌಲ್ ಸಾಲಿನ್ಸ್ ಅವರು ಕಾರ್ಯಾಚರಣೆ ನಡೆಸಿ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

Edited By : PublicNext Desk
Kshetra Samachara

Kshetra Samachara

12/09/2022 07:10 pm

Cinque Terre

1.14 K

Cinque Terre

0

ಸಂಬಂಧಿತ ಸುದ್ದಿ