ಕಾರ್ಕಳ: ಬಿಜೆಪಿ ಜನತಾ ಪಾರ್ಟಿ ಕಾರ್ಕಳ ಹಾಗೂ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚ ಕಾರ್ಕಳ ಮಂಡಲ ವತಿಯಿಂದ ದಿ. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಯಂತಿ ಕಾರ್ಯಕ್ರಮವನ್ನು ವಿಜೇತ ವಿಶೇಷ ಶಾಲೆಯಲ್ಲಿ ಆಚರಿಸಲಾಯಿತು.
ಪಂಡಿತ್ ದೀನ್ ದಯಾಳ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಗೌರವಿಸಿ, ವಿಜೇತ ವಿಶೇಷ ಶಾಲಾ ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಕಳ ಮಂಡಲ ಅಧ್ಯಕ್ಷ ರಾಮನಂದ್ ನಲ್ಲೂರು, ಪ್ರದಾನ ಕಾರ್ಯದರ್ಶಿ ದಿವಾಕರ್ ಬಂಗೇರ, ಶ್ರೀನಿವಾಸ್ ಪೂಜಾರಿ, ಉಪಾಧ್ಯಕ್ಷ ಸದಾನಂದ್ ಸಾಲ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ನಗರಾಧ್ಯಕ್ಷರು ಶೋಭಾ ಭಾಸ್ಕರ್, ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಹರೀಶ್ ದೇವಾಡಿಗ, ಪದಾಧಿಕಾರಿ ಶ್ರೀಮತಿ ಸುಚಿತ್ರಾ ಶೆಟ್ಟಿ ಉಪಸ್ಥಿತರಿದ್ದರು.
Kshetra Samachara
25/09/2021 04:04 pm