ಉದ್ಯಾವರ: ಭಾರೀ ಮಳೆ ಹಾಗೂ ನೆರೆಯ ಕಾರಣ ಮನೆ ಕುಸಿದು ಸಂಕಷ್ಟಕ್ಕೊಳಗಾದ ಉದ್ಯಾವರ ಪಿತ್ರೋಡಿಯ ಕಲಾಯಿಬೆಟ್ಟು ನಿವಾಸಿಗಳಾದ ರಾಘು ಪೂಜಾರಿ, ಅವರ ಸಹೋದರಿ ಯಶೋದಾ ಪೂಜಾರಿ ಹಾಗೂ ಕುಟುಂಬಿಕರಿಗೆ ಲಯನ್ಸ್ ಕ್ಲಬ್ ಉಡುಪಿ, ಪ್ರಾಂತ್ಯ IV ಹಾಗೂ ಲಯನ್ಸ್ ಜಿಲ್ಲೆ 317ಸಿ ವತಿಯಿಂದ ಐದು ಸಾವಿರ ನಗದು ಹಾಗೂ ಸಾವಿರಾರು ರೂ. ಮೌಲ್ಯದ ಅಕ್ಕಿ ಮತ್ತಿತರ ದಿನಸಿ ಸಾಮಗ್ರಿ ಪರಿಹಾರವಾಗಿ ನೀಡಲಾಯಿತು. ಲಯನ್ಸ್ ಜಿಲ್ಲಾ ಗವರ್ನರ್ ಎನ್.ಎಂ. ಹೆಗ್ಡೆ ಪರಿಹಾರದ ಚೆಕ್ಕನ್ನು ಹಸ್ತಾಂತರಿಸಿದರು.
ಪ್ರಾಂತ್ಯಾಧ್ಯಕ್ಷ ರಂಜನ್ ಕೆ., ವಲಯಾಧ್ಯಕ್ಷರಾದ ಗಂಗಾಧರ ಶೆಟ್ಟಿಗಾರ್, ಪಾದೆಮಠ ಶಂಕರ್ ಶೆಟ್ಟಿ, ಲಯನ್ಸ್ ಜಿಲ್ಲಾ ನೆರೆ ಪರಿಹಾರ ಟಾಸ್ಕ್ ಫೋರ್ಸ್‌ನ ಸಂಚಾಲಕ ರವಿರಾಜ ನಾಯಕ್, ಲಯನ್ಸ್ ಕ್ಲಬ್ ಉಡುಪಿ ಕಾರ್ಯದರ್ಶಿ ಅಲೆವೂರು ದಿನೇಶ್ ಕಿಣಿ, ಕೋಶಾಧಿಕಾರಿ ಲೂಯಿಸ್ ಲೋಬೊ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
21/09/2020 08:49 pm